ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನ (IND vs PAK) ನಡುವಿನ T20 ವಿಶ್ವಕಪ್ ಪಂದ್ಯದಲ್ಲಿ ಭಾರತ 4 ವಿಕೆಟ್ಗಳಿಂದ ಗೆದ್ದಿದೆ. ಇನ್ನು ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲು, ಬೌಲಿಂಗ್ನಲ್ಲಿ 3 ವಿಕೆಟ್ ಪಡೆದ ನಂತ್ರ ಅವ್ರು ಬ್ಯಾಟಿಂಗ್ನಲ್ಲಿ ಪ್ರಮುಖ 40 ರನ್ ಗಳಿಸಿದರು. ಇನ್ನು ಈ ಗೆಲುವಿನ ನಂತ್ರ ಹಾರ್ದಿಕ್ ತುಂಬಾ ಭಾವುಕರಾಗಿದ್ರು. ಈ ಗೆಲುವಿನ ನಂತ್ರ, ತಮ್ಮ ಕ್ರಿಕೆಟ್ಗಾಗಿ ತಮ್ಮ ಕುಟುಂಬವು ಮಾಡಿದ ತ್ಯಾಗವನ್ನ ನೆನಪಿಸಿಕೊಂಡರು ಮತ್ತು ನಂತ್ರ ಮೈದಾನದಲ್ಲಿ ತಮ್ಮ ಅಳಲು ತೋಡಿಕೊಂಡರು.
ಅಳುತ್ತಲೇ ಹಾರ್ದಿಕ್ ಅವರು ತಮ್ಮ ಕ್ರಿಕೆಟ್ಗಾಗಿ ಕುಟುಂಬದವರು ಮಾಡಿದ ಶ್ರಮ ಮತ್ತು ತ್ಯಾಗವನ್ನು ನೆನಪಿಸಿಕೊಂಡರು. ತಮಗಾಗಿ ಅವರು ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆರಳಿದರು. ಸ್ವಂತ ಮಗನನ್ನ ತುಂಬಾ ಪ್ರೀತಿಸುವ ತಂದೆ ಮತ್ತು ಕುಟುಂಬಸ್ಥರು ಮಾಡಿದ ತ್ಯಾಗ ದೊಡ್ಡದು ಎಂದು ಪಾಂಡ್ಯ ವಿಡಿಯೋದಲ್ಲಿ ಹೇಳಿದ್ದಾರೆ.
ವಿಡಿಯೋ ನೋಡಿ.!
Hardik Pandya got emotional during the interview – this victory means alot! pic.twitter.com/rf1IFdKrwv
— satyaRD🇮🇳 (@rd_satya) October 23, 2022