ಉತ್ತರಪ್ರದೇಶ : ಶೀಘ್ರದಲ್ಲೇ ಅಯೋಧ್ಯೆಯಲ್ಲಿ ‘ವಿಮಾನ ನಿಲ್ದಾಣ’ ಸ್ಥಾಪನೆ, ರಾಮಾಯಣ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ನಿರ್ಧಾರ ಮಾಡಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೇಶದ ಜನತೆಗೆ ಪ್ರಧಾನಿ ಮೋದಿ ದೀಪಾವಳಿ ಶುಭಾಶಯ ಕೋರಿದ್ದಾರೆ. ಯುಪಿಯ ಅಯೋಧ್ಯೆಯಲ್ಲಿ ನಡೆಯುವ ಭವ್ಯ ದೀಪೋತ್ಸವದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರು ಉತ್ತರಪ್ರದೇಶಕ್ಕೆ ತೆರಳಿದ್ದು, ಈ ವೇಳೆ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ.
ದೇಶದ ಜನತೆಗೆ ದೀಪಾವಳಿ ಶುಭಾಶಯಗಳು, ಶ್ರೀರಾಮನ ದರ್ಶನ ನಮಗೆಲ್ಲಾ ಮಾದರಿ, ಅಯೋಧ್ಯೆಯಲ್ಲಿ ದೀಪಾವಳಿ ಆಚರಿಸುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು, ಅಯೋಧ್ಯೆ ಸ್ವರ್ಗಕ್ಕೆ ಸಮನಾದದ್ದು, ಜಾಗತಿಕ ಮಟ್ಟದಲ್ಲಿ ಅಯೋಧ್ಯೆ ಅಭಿವೃದ್ದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ಮೋದಿ ಪವಿತ್ರ ನಗರವನ್ನು ತಲುಪಿದ ನಂತರ ಪ್ರಧಾನಿ ಮೋದಿ ರಾಮ ಜನ್ಮಭೂಮಿಯಲ್ಲಿ ರಾಮ್ ಲಲ್ಲಾಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಸ್ಥಳವನ್ನೂ ಅವರು ಪರಿಶೀಲಿಸಿದರು. ಬಳಿಕ ಸಾಂಕೇತಿಕ ಭಗವಾನ್ ಶ್ರೀರಾಮನ ರಾಜ್ಯಾಭಿಷೇಕ ನೆರವೇರಿಸಲಿದ್ದಾರೆ. ಇಂದು, ನಗರದಾದ್ಯಂತ 18 ಲಕ್ಷ ದೀಪಗಳನ್ನು ಬೆಳಗಿಸುವ ಮೂಲಕ ನಗರವು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಲಿದೆ.
ಅಯೋಧ್ಯೆ ಸ್ವರ್ಗಕ್ಕೆ ಸಮನಾದ ಪುಣ್ಯ ಭೂಮಿ, ಇಲ್ಲಿ ದೀಪಾವಳಿ ಆಚರಿಸುತ್ತಿರುವುದು ನನ್ನ ಸೌಭಾಗ್ಯ , ಶೀಘ್ರವೇ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ, ಸರ್ಕಾರ ರಾಮಾಯಣ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಗವಾನ್ ಶ್ರೀರಾಮ, ತಮ್ಮ ಆಡಳಿತದಲ್ಲಿ,ವಿಚಾರಧಾರೆಯಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲ ಮಂತ್ರವಾಗಿಟ್ಟಿದ್ದರು. ಶ್ರೀರಾಮ ಆದರ್ಶದಲ್ಲಿ ನಾವು ಮುನ್ನಡೆಯಬೇಕು. ಶ್ರೀರಾಮ ಅತ್ಯಂತ ಕಠಿಣ ಹಾದಿಯನ್ನು ಸವೆಸಿ ಯಶಸ್ಸು ಸಾಧಿಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ ಸಿ.ಎಂ ಇಬ್ರಾಹಿಂ- ‘ಕೆಜಿಎಫ್ ಬಾಬು’ ಭೇಟಿ: ಶೀಘ್ರವೇ JDS ಸೇರ್ಪಡೆ?
‘ಅಶ್ಲೀಲ’ ಬಟ್ಟೆ ಧರಿಸಿ ನಟಿಯಿಂದ ‘ದೀಪಾವಳಿ ವಿಶ್’ : ಹಿಂದೂ ಭಾವನೆಗಳಿಗೆ ಧಕ್ಕೆ
BREAKING NEWS: ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ವ್ಯಕ್ತಿಗೆ ಚಾಕು ಇರಿತ, ಸ್ಥಿತಿ ಗಂಭೀರ