ಬೆಂಗಳೂರು : ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆಗಳು ಇದ್ದು, ಊರಿನತ್ತ ಜನರು ಪ್ರಯಾಣ ಬೆಳೆಸುತ್ತಿದ್ದಾರೆ.
ಇದನ್ನೇ ಸಿಕ್ಕಿದ್ದು ಚಾನ್ಸ್ ಎಂದುಕೊಂಡ ಖಾಸಗಿ ಬಸ್ ಗಳು ಮನಸ್ಸಿಗೆ ಬಂದ ಹಾಗೆ ವಸೂಲಿ ಮಾಡುತ್ತಿದ್ದಾರೆ. ಪ್ರಯಾಣಿಕರಿಂದ ಹಣ ವಸೂಲಿಗೆ ಇಲಿದ ಖಾಸಗಿ ಬಸ್ಗಳ ವಿರುದ್ಧ ಅಖಾಡಕ್ಕಿಳಿದ ಆರ್ಟಿಓ (ಖಖಿಔ) ಅಧಿಕಾರಿಗಳು ದಂಡಾಸ್ತ್ರ ಉಪಯೋಗಿಸಿದ್ದಾರೆ. ಮೂರು ದಿನಗಳಲ್ಲಿ 1.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಇಂದು ಕೂಡ ಸಂಜೆ 5 ಗಂಟೆಯಿಂದ ಖಾಸಗಿ ಬಸ್ಸುಗಳ ಪರಿಶೀಲನೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ.
ಅ.20ರಂದು ದುಬಾರಿ ಟಿಕೆಟ್ ದರ ವಸೂಲಿ ಮಾಡುತ್ತಿದ್ದ 198 ಬಸ್ಗಳನ್ನು ಹಿಡಿದು ಪ್ರಕರಣ ದಾಖಲಿಸಲಾಗಿದೆ. ಎರಡನೇ ದಿನ ಅಂದರೆ ಅ.21 ರಂದು 143 ಬಸ್ ಹಿಡಿದು ಪ್ರಕರಣ ದಾಖಲಿಸಿದರೆ, ಮೂರನೇ ದಿನದಂದು ಅಂದರೆ ಅ.22 ರಂದು 109 ಗಾಡಿಗಳನ್ನ ಹಿಡಿದು ಪ್ರಕರಣ ದಾಖಲಿಸಲಾಗಿದೆ. ಆರ್ಟಿಓ ಅಧಿಕಾರಿಗಳು ಟ್ರಾವೆಲ್ಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಒಟ್ಟು 1.90 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.
ದೀಪಾವಳಿ ಹಬ್ಬಕ್ಕಾಗಿ ಊರುಗಳಿಗೆ ತೆರಳಲು ಸಿದ್ಧತೆ ನಡೆಸಿರುವ ಪ್ರಯಾಣಿಕರಿಗೆ ಖಾಸಗಿ ಬಸ್ ಗಳು ಪ್ರಯಾಣ ದರ ಹೆಚ್ಚಿಸಿ ದುಪ್ಪಟ್ಟು ಹಣ ವಸೂಲಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಖಡಕ್ ಎಚ್ಚರಿಕೆ ನೀಡಿದ್ದರೂ, ಖಾಸಗಿ ಬಸ್ ಗಳ ಮಾಲೀಕರು ದುಪಟ್ಟು ದರ ವಸೂಲಿ ಮಾಡುತ್ತಿದ್ದಾರೆ.ಬೆಂಗಳೂರಿನಿಂದ ಹುಬ್ಬಳ್ಳಿ, ಕಾರವಾರ, ಗೋವಾ, ಹೈದರಾಬಾದ್ ಸೇರಿದಂತೆ ನಾನಾ ಮಾರ್ಗಗಳ ನಡುವೆ ಅ.21, ಅ.24 ರ ಅವಧಿಯಲ್ಲಿ ವಿಮಾನ ಪ್ರಯಾಣ ದರಕ್ಕಿಂಗ ಬಸ್ ಪ್ರಯಾಣವೇ ದುಬಾರಿಯಾಗಿದೆ.
ಹೌದು, ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನಯಾನಕ್ಕೆ 3,694 ರೂ. ಪ್ರಯಾಣ ದರವಿತ್ತು. ಇದೇ ಮಾರ್ಗದಲ್ಲಿ ಸಾಮಾನ್ಯವಾಗಿ 500 ರಿಂದ 800 ರೂ. ಇದ್ದ ಖಾಸಗಿ ಬಸ್ ಟಿಕೆಟ್ ದರ ಹಬ್ಬದ ನೆಪದಲ್ಲಿ 5 ಸಾವಿರ ರೂ.ಗೆ ಏರಿಕೆಯಾಗಿದೆ. ಬೆಂಗಳೂರು-ಕಾರವಾರ ನಡುವೆ ಸ್ಲೀಪರ್ ಕೋಚ್ ಬಸ್ ಗೆ 4,099 ರೂ. ಇದ್ದರೆ ಬೆಂಗಳೂರು –ಮಂಗಳೂರು ನಡುವೆ 3,400 ರೂ. ಬೆಂಗಳೂರು-ಗೋವಾ ನಡುವೆ 4 ಸಾವಿರ ರೂ. ದರ ಹೆಚ್ಚಳ ಮಾಡಲಾಗಿದೆ.