ರಾಯಚೂರು : ರಾಹುಲ್ ಗಾಂಧಿ ವೇದಿಕೆ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಸ್ಥಳ ಸಿಗದ ಕಾರಣ ನಟಿ ರಮ್ಯಾ ವಾಪಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರಿನಲ್ಲಿ ನಡೆಯುತ್ತಿದ್ದ ಭಾರತ್ ಜೋಡೋ ಯಾತ್ರೆಯಲ್ಲಿ ಮಾಜಿ ಸಂಸದೆ ನಟಿ ರಮ್ಯಾ ಪ್ರತ್ಯಕ್ಷರಾಗಿದ್ದರು. ನಿನ್ನೆ ರಾಯಚೂರು ನಗರಕ್ಕೆ ಯಾತ್ರೆ ಬರುತ್ತಿದ್ದಂತೆ ನಟಿ ರಮ್ಯಾ ಟೀಂ ಸೇರಿಕೊಂಡಿದ್ದರು. ಡಿ.ಕೆ ಶಿವಕುಮಾರ್ ಕೂಡ ಖುಷಿಯಿಂದ ರಮ್ಯಾರನ್ನು ಬರಮಾಡಿಕೊಂಡಿದ್ದರು. ನಂತರ ರಾಹುಲ್ ಗಾಂಧಿ, ಸಿದ್ದರಾಮಯ್ಯ ಜೊತೆ ರಮ್ಯಾ ಒಂದು ಕಿ.ಮೀ ಹೆಜ್ಜೆ ಹಾಕಿದ್ದರು.
ಆದರೆ ವಿಚಾರ ಏನಪ್ಪಅಂದ್ರೆ ಪಾದಯಾತ್ರೆ ಬಳಿಕ ಬಸವೇಶ್ವರ ಸರ್ಕಲ್ ಬಳಿ ನಡೆದ ಕಾರ್ಯಕ್ರಮದಲ್ಲಿ ರಮ್ಯಾಗೆ ಜಾಗ ನೀಡಿದ ಹಿನ್ನೆಲೆ ಅಸಮಾಧಾನಗೊಂಡಿದ್ದಾರೆ. ರಾಯಚೂರು ನಗರ ಬಸವೇಶ್ವರ ಸರ್ಕಲ್ ಬಳಿಯ ಮೈದಾನದಲ್ಲಿ ಕಾರ್ನರ್ ಸಂವಾದವಿತ್ತು. ಕಾರ್ಯಕ್ರಮದ ವೇದಿಕೆ ಮೇಲೆ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು. ಈ ವೇಳೆ ನಟಿ ರಮ್ಯಾ ವೇದಿಕೆ ಮೇಲೆ ಆಗಮಿಸಲು ಮುಂದಾಗಿದ್ದಾಗ ರಮ್ಯಾಗೆ ಸ್ಥಳವೇ ಸಿಗಲಿಲ್ಲ. ಗೆಸ್ಟ್ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶವಿತ್ತು. ಆಗ ನಟಿ ರಮ್ಯಾರ ಹೆಸರು ಲಿಸ್ಟ್ ನಲ್ಲಿ ಇರಲಿಲ್ಲವಂತೆ. ರಮ್ಯಾ ಈ ಬಗ್ಗೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿಕೊಂಡರೂ ವೇದಿಕೆಗೆ ಬಿಡಲಿಲ್ಲವಂತೆ,.ಇದರಿಂದ ಸಿಟ್ಟಾದ ರಮ್ಯಾ ಸ್ಥಳದಿಂದ ವಾಪಸ್ ಆಗಿದ್ದಾರೆ ಎನ್ನಲಾಗಿದೆ. ಈ ವಿಚಾರಕ್ಕೆ ಭದ್ರತಾ ಸಿಬ್ಬಂದಿ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕರ್ನಾಟಕದಲ್ಲಿ ‘ಭಾರತ್ ಜೋಡೋ ಯಾತ್ರೆ’ ಯಶಸ್ವಿಯಾಯಿತು , ಧನ್ಯವಾದಗಳು’ : ಸಿದ್ದರಾಮಯ್ಯ ಟ್ವೀಟ್
Diwali Alert ; ಮಹಿಳೆಯರೇ ಎಚ್ಚರ, ‘ಹ್ಯಾಪಿ ದೀಪಾವಳಿ’ ಅಂತಾ ದೋಚ್ತಿದ್ದಾರೆ.! ನೀವೇ ಟಾರ್ಗೇಟ್