ಚಾಮರಾಜನಗರ: ಜಿಲ್ಲೆ ಗುಂಡ್ಲುಪೇಟೆಯಲ್ಲಿ ಸಮಸ್ಯೆ ಹೇಳೋಕ್ಕೆ ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಕ್ಕೆ ಸಚಿವ ವಿ.ಸೋಮಣ್ಣ ಕ್ಷಮೆಯಾಚಿಸಿದ್ದಾರೆ.
ಹೆಣ್ಣು ಮಗಳು ಪದೇ ಪದೇ ವೇದಿಕೆಗೆ ಬರುತ್ತಿದ್ದರು, ತಾಯಿ ಎಷ್ಟು ಬಾರಿ ಬರುತ್ತೀಯಾ ಎಂದು ಕೈಯಲ್ಲಿ ಪಕ್ಕಕ್ಕೆ ಸರಿಸಿದೆ ಅಷ್ಟೆ, ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಅಚಾತುರ್ಯ ನಡೆದಿದೆ. ಮನಸ್ಸಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಯಾರ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿ.ಸೋಮಣ್ಣ ಕಪಾಳಮೋಕ್ಷ ವಿಚಾರ ಸುದ್ದಿಯಾಗುತ್ತಿದ್ದಂತೆ ಹೊಡೆತ ತಿಂದ ಕೆಂಪಮ್ಮ ಉಲ್ಟಾ ಹೊಡೆದಿದ್ದರು. ಸಚಿವರು ನನಗೆ ಹೊಡೆದಿಲ್ಲ. ನನಗೂ ಸೈಟ್ ಕೊಡಿ ಎಂದು ಕಾಲಿಗೆ ಬಿದ್ದೆ . ಆಗಾ ನನ್ನನ್ನು ಎತ್ತಿ ಕ್ಷಮೆ ಕೇಳಿ ಸಚಿವರು ಸಮಾಧಾನಪಡಿಸಿದರು. ಸಚಿವ ಸೋಮಣ್ಣ ಹೊಡೆದ್ರೂ ಹೊಡೆದಿಲ್ಲ ಅಂತಾ ಕೆಂಪಮ್ಮ ಉಲ್ಟಾ ಹೊಡೆದಿದ್ದರು.
ಇನ್ನು ಸಮಸ್ಯೆ ಹೇಳು ಮುಂದಾಗಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ ನಡೆದಿದೆ.ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಹೀಗಾಗಿ ಇದರಿಂದ ಬೇಸತ್ತ ಮಹಿಳೆ ತನ್ನ ಸಮಸ್ಯೆ ಹೇಳಿಕೊಳ್ಳಲು ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿತ್ತು.
ನ.20ರಂದು ಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಎಸ್ಟಿ ಮೋರ್ಚಾ ಸಮಾವೇಶ : ಸಚಿವ ಶ್ರೀರಾಮುಲು
HEALTH TIPS: ವಿಟಮಿನ್ ಸಿ ಇರುವ ಆಹಾರಗಳಿಂದ ಬಿಪಿ-ಶುಗರ್ ನಿಯಂತ್ರಿಸುತ್ತೆ..!; ತಜ್ಞರ ಸಲಹೆ
ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳ ಮೋಕ್ಷ ವಿಚಾರ : ಗೃಹ ಸಚಿವರು ಜೀವಂತವಾಗಿದ್ದರೆ ಕ್ರಮ ಕೈಗೊಳ್ಳಿ : ಕಾಂಗ್ರೆಸ್ ಆಕ್ರೋಶ