ನವದೆಹಲಿ: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ಭಾನುವಾರ ನಸುಕಿನಲ್ಲಿ(ಮಧ್ಯರಾತ್ರಿ 12.07 ಕ್ಕೆ) ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನಿಲ್ದಾಣದಿಂದ ತನ್ನ ಅತ್ಯಂತ ಭಾರವಾದ ರಾಕೆಟ್ LVM3-M2 ನಲ್ಲಿ 36 ಬ್ರಾಡ್ಬ್ಯಾಂಡ್ ಸಂವಹನ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಯಶಸ್ವಿಯಾಗಿ ಉದ್ದೇಶಿತ ಕಕ್ಷೆಗೆ ಸೇರಿಸಿದ ಇಸ್ರೋ (ISRO)ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
“ಜಾಗತಿಕ ಸಂಪರ್ಕಕ್ಕಾಗಿ 36 OneWeb ಉಪಗ್ರಹಗಳೊಂದಿಗೆ ನಮ್ಮ ಭಾರವಾದ ಉಡಾವಣಾ ವಾಹನ LVM3 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ISRO ಗೆ ಅಭಿನಂದನೆಗಳು. LVM3 ಆತ್ಮನಿರ್ಭರ್ತವನ್ನು ಉದಾಹರಿಸುತ್ತದೆ ಮತ್ತು ಜಾಗತಿಕ ವಾಣಿಜ್ಯ ಉಡಾವಣಾ ಸೇವಾ ಮಾರುಕಟ್ಟೆಯಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ” ಎಂದು ಅವರು ಹೇಳಿದರು.
Congratulations @NSIL_India @INSPACeIND @ISRO on the successful launch of our heaviest launch vehicle LVM3 with 36 OneWeb satellites meant for global connectivity. LVM3 exemplifies Atmanirbharta & enhances India’s competitive edge in the global commercial launch service market.
— Narendra Modi (@narendramodi) October 23, 2022
LVM3 M2/OneWeb India-1 ಮಿಷನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎಲ್ಲಾ 36 ಉಪಗ್ರಹಗಳನ್ನು ಉದ್ದೇಶಿತ ಕಕ್ಷೆಗೆ ಇರಿಸಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
BIGG NEWS : ರಾಜ್ಯಕ್ಕೆ ಒಂದು ವರ್ಷದಲ್ಲಿ ಮಹದಾಯಿ ನೀರು ಬರಲಿದೆ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ನಿಮಗೆ ಕೆಲಸದ ಸ್ಥಳದಲ್ಲಿ ದುಃಖ, ನಿರುತ್ಸಾಹ, ನಿರ್ಲಕ್ಷ್ಯದ ಭಾವನೆ ಕಾಡುತ್ತಿದೆಯೇ? ಅದಕ್ಕೆ ಮುಖ್ಯ ಕಾರಣ ಇದೇ?
BIG NEWS : ತೆಲಂಗಾಣ ರಾಜ್ಯ ಪ್ರವೇಶಿಸಿದ ʻಭಾರತ್ ಜೋಡೋ ಯಾತ್ರೆʼ| Bharat Jodo Yatra enters Telangana