ಬಹ್ರೈಚ್(ಉತ್ತರ ಪ್ರದೇಶ): ಟಾಯ್ಲೆಟ್ ಸೀಟ್ ಕದ್ದ ಆರೋಪದ ಮೇಲೆ ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವನ ತಲೆ ಬೋಳಿಸಿ, ಮುಖಕ್ಕೆ ಕಪ್ಪು ಮಸಿ ಬಳಿದಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ನಲ್ಲಿ ನಡೆದಿದೆ.
ಸ್ಥಳೀಯ ಬಿಜೆಪಿ ನಾಯಕ ರಾಧೇಶ್ಯಾಮ್ ಮಿಶ್ರಾ ಮತ್ತು ಅವರ ಇಬ್ಬರು ಸಹಾಯಕರು ಮಂಗಳವಾರ 30 ವರ್ಷದ ರಾಜೇಶ್ ಕುಮಾರ್ ಅವರನ್ನು ಕಂಬಕ್ಕೆ ಕಟ್ಟಿ, ಮುಖಕ್ಕೆ ಕಪ್ಪು ಬಣ್ಣ ಬಳಿದು ಥಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜೇಶ್ ಜಿಲ್ಲೆಯ ಹಾರ್ಡಿ ಪ್ರದೇಶದ ಮನೆಯೊಂದರಿಂದ ಶೌಚಾಲಯದ ಸೀಟನ್ನು ಕದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ದೃಶ್ಯಾವಳಿಗೆಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
बहराइच में राधेश्याम मिश्रा एवं अन्य ने एक SC युवक पर चोरी का आरोप लगाकर उसे खंबे से बांधा, चेहरे पर कालिख पोती और उसका सिर मुड़वाया।
SC लोगों द्वारा धम्म दीक्षा लेने पर छटपटाने वाले तमाम ब्राह्मण-हिंदू अब मौन क्यों धारण किए हुए हैं?pic.twitter.com/lXwZIGwgT5
— Suraj Kumar Bauddh (@SurajKrBauddh) October 21, 2022
ಆರೋಪಿಗಳ ವಿರುದ್ಧ ಹಲ್ಲೆ, ಕ್ರಿಮಿನಲ್ ಬೆದರಿಕೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧದ ಅಪರಾಧಗಳನ್ನು ಶಿಕ್ಷಿಸಲು ಕಠಿಣ ಕಾನೂನಿನ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ ಮತ್ತು ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.