ಉಕ್ರೇನ್: ಶನಿವಾರ ರಾತ್ರಿ ಉಕ್ರೇನ್(Ukraine) ಮೇಲೆ “ಬೃಹತ್ ದಾಳಿ” ನಡೆದಿದೆ. ದೇಶದ ಮೇಲೆ ಆಕ್ರಮಣಕ್ಕೆ ಬಂದ ರಷ್ಯಾ(Russia)ದ 36 ರಾಕೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಹೇಳಿದ್ದಾರೆ.
ʻಆಕ್ರಮಣಕಾರರು ನಮ್ಮ ದೇಶವನ್ನು ಭಯಭೀತಗೊಳಿಸುವುದನ್ನು ಮುಂದುವರೆಸಿದ್ದಾರೆ. ಶನಿವಾರ ರಾತ್ರಿ ಶತ್ರುಗಳು ಬೃಹತ್ ದಾಳಿ ನಡೆಸಿದ್ದಾರೆ. ಇದು ದೇಶಾದ್ಯಂತ ವಿದ್ಯುತ್ ಕಡಿತಕ್ಕೆ ಕಾರಣವಾಗಿದೆ. ದಾಳಿ ವೇಳೆ ರಷ್ಯಾದ 36 ರಾಕೆಟ್ಗಳನ್ನು ಹೊಡೆದುರುಳಿಸಲಾಗಿದೆʼ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.
ಉಕ್ರೇನಿಯನ್ ಪ್ರೆಸಿಡೆನ್ಸಿಯ ಉಪ ಮುಖ್ಯಸ್ಥರು ರಷ್ಯಾದ ದಾಳಿಯಿಂದ ಉಕ್ರೇನ್ನಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಮನೆಗಳಲ್ಲಿ ವಿದ್ಯುತ್ ಕಡಿತವಾಗಿದೆ ಎಂದು ಹೇಳಿದರು.
BIGG NEWS : `KPSC’ ವಿವಿಧ ಇಲಾಖೆ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಮಾಹಿತಿ