ಬೆಳಗಾವಿ : ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ, ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ (56) ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ನಿಧನರಾಗಿದ್ದಾರೆ.
BIGG BREAKING NEWS : ಬಿಜೆಪಿ ಶಾಸಕ, ವಿಧಾನಸಭೆ ಉಪಸಭಾಪತಿ `ಆನಂದ ಮಾಮನಿ’ ಇನ್ನಿಲ್ಲ| Ananda Mamani no more
ತೀವ್ರ ಅನಾರೋಒಗ್ಯದಿಂದ ಬಳಲುತ್ತಿದ್ದ ಶಾಸಕ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ನಿಧನರಾಗಿದ್ದಾರೆ. ಮಾಮನಿ ಸಾವಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಂತಮ ದರ್ಶನ ಪಡೆದು ಮಾತನಾಡಿದ ಅವರು, ಕ್ರಿಯಾಶೀಲ ರಾಜಕಾರಣಿಯಾಗಿದ್ದ ಮಾಮನಿ ನಮ್ಮೊಂದಿಗಿಲ್ಲ ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ
ಇತ್ತೀಚೆಗೆಷ್ಟೆ ಉಮೇಶ್ ಕತ್ತಿ ಕಳೆದು ಕೊಂಡಿದ್ದೇವೆ. ಈಗ ಮತ್ತೆ ಬೆಳಗಾವಿ ಜಿಲ್ಲೆಯ ಮತ್ತೊಬ್ಬರುನ್ನು ಕಳೆದುಕೊಂಡಿದ್ದೇವೆ. ಮಾಮನಿ ತುಂಬ ಸಣ್ಣ ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದವರು. ಮಾದರಿ ಶಾಸಕ, ನೀರಾವರಿ, ರಸ್ತೆ, ಶಾಲಾ ಕಟ್ಟಡ ಸೇರಿ ತಮ್ಮ ಕ್ಷೇತ್ರವನ್ನು ತುಂಬ ಪ್ರೀತಿಸುತ್ತಿದ್ದರು ಎಂದು ಕಣ್ಣೀರು ಹಾಕಿದ್ದಾರೆ.
BIGG BREAKING NEWS : ಬಿಜೆಪಿ ಶಾಸಕ, ವಿಧಾನಸಭೆ ಉಪಸಭಾಪತಿ `ಆನಂದ ಮಾಮನಿ’ ಇನ್ನಿಲ್ಲ| Ananda Mamani no more
ಇನ್ನು ತೀವ್ರ ಅನಾರೋಒಗ್ಯದಿಂದ ಬಳಲುತ್ತಿದ್ದ ಶಾಸಕ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ನಿಧನರಾಗಿದ್ದಾರೆ.
ಆನಂದ್ (ವಿಶ್ವನಾಥ್) ಚಂದ್ರಶೇಖರ್ ಮಾಮನಿ ಅವರು ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜನವರಿ 18, 1966 ಜನಿಸಿದರು. ತಂದೆ ಚಂದ್ರಶೇಖರ ಮಲ್ಲಿಕಾರ್ಜುನ ಮಾಮನಿ, ತಾಯಿ ಶ್ರೀಮತಿ ಗಂಗಮ್ಮ ಮಾಮನಿ. ಹಿಂದೂ ಲಿಂಗಾಯತ (ಪಂಚಮಸಾಲಿ) ಸಮುದಾಯಕ್ಕೆ ಸೇರಿದ ಇವರು ಸವದತ್ತಿಯ ಗೌರವಕುಟುಂಬಕ್ಕೆ ಸೇರಿದವರು
ರಾಜ್ಯ ವಿಧಾನ ಸಭೆಯ ಮಾನ್ಯ ಉಪ ಸಭಾಧ್ಯಕ್ಷರಾದ ಶ್ರೀ ಆನಂದ ಮಾಮನಿ ಅವರು ನಿಧನರಾದ ಹಿನ್ನಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಅವರ ಪ್ರಾರ್ಥಿವ ಶರೀರದ ದರ್ಶನ ಪಡೆದು, ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿದೆನು.
ಓಂ ಶಾಂತಿಃ pic.twitter.com/DMcLOzC49d
— Basavaraj S Bommai (@BSBommai) October 22, 2022
.