ಕೆಎನ್ಎನ್ ಡಿಜಿಟಲ್ ಡೆಸ್ಕ್ : ಬ್ಯಾಕ್ಟೀರಿಯಾ, ಶಿಲೀಂಧ್ರಗಳು, ವೈರಸ್ಗಳು ಮುಂತಾದ ಜೀವಿಗಳ ಸೂಕ್ಷ್ಮ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಇರುವೆಗಳಂತಹ ಜೀವಿಗಳ ಕ್ಲೋಸ್ ಅಪ್ ಫೋಟೋವನ್ನು ನೀವು ಎಂದಾದರೂ ನೋಡಿದ್ದೀರಾ? ಇರುವೆಗಳು ಹೇಗೆ ಕಾಣುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
BIG NEWS: ಕಾಂಗ್ರೆಸ್ #PayCM ಪೋಸ್ಟರ್ ಅಭಿಯಾನಕ್ಕೆ ಬಿಜೆಪಿಯಿಂದ #SaySiddu ಅಭಿಯಾನ ಆರಂಭ
ಲಿಥುವೇನಿಯನ್ ವನ್ಯಜೀವಿ ಛಾಯಾಗ್ರಾಹಕ ಯುಜೆನಿಜಸ್ ಕವಾಲಿಯುಸ್ಕಾಸ್ ಇರುವೆಯ ಸೂಕ್ಷ್ಮ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ. ಸೂಕ್ಷ್ಮದರ್ಶಕಗಳನ್ನು ಬಳಸಿ ತೆಗೆಯಲಾದ ಅತ್ಯುತ್ತಮ ಛಾಯಾಚಿತ್ರ ಎಂದು ಗುರುತಿಸಲಾಗುತ್ತಿದೆ. ಇದೀಗ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಾ ಇದೆ.
ಕವಲಿಯಾಸ್ಕಾಸ್ ಕ್ಲಿಕ್ ಮಾಡಿದ ಚಿತ್ರವು ನಾವು ಇಲ್ಲಿಯವರೆಗೆ ಊಹಿಸಿರುವುದಕ್ಕಿಂತ ವಿಭಿನ್ನ ಚಿತ್ರವನ್ನು ತೋರಿಸುತ್ತದೆ. ಫೋಟೋ ಕೆಂಪು ಕಣ್ಣುಗಳೊಂದಿಗೆ ಭಯಾನಕ ಪ್ರಾಣಿಯನ್ನು ತೋರಿಸುತ್ತದೆ. ಚಿನ್ನದ ಕೋರೆಹಲ್ಲುಗಳು ಮತ್ತು ತೀಕ್ಷ್ಣವಾದ ಮತ್ತು ತೀವ್ರವಾದ ವೈಶಿಷ್ಟ್ಯಗಳನ್ನು ತೋರಿಸುತ್ತದೆ.
ಈ ಚಿತ್ರವನ್ನು 2022 ರ ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ ಸ್ಪರ್ಧೆಗೆ ಸಲ್ಲಿಸಲಾಗಿದೆ. ಇದು ಸೂಕ್ಷ್ಮದರ್ಶಕ ಛಾಯಾಗ್ರಹಣದ ಕಲೆಯನ್ನು ಪ್ರದರ್ಶಿಸುತ್ತದೆ. ಮಾನವನ ಕಣ್ಣಿಗೆ ಕಾಣದ ವಿವರಗಳನ್ನು ಸೆರೆಹಿಡಿಯಲು ಜನರನ್ನು ಪ್ರೇರೇಪಿಸುತ್ತದೆ.
This hellish-looking thing is real, and you've actually seen it before: This is what an ant looks like up close. This shot by photographer Eugenijus Kavaliauskas was magnified five times under a microscope.
📸: Eugenijus Kavaliauskas/Nikon Small World pic.twitter.com/aNCTO2mbg2
— WIRED (@WIRED) October 20, 2022
ಲಿಥುವೇನಿಯಾದ ನನ್ನ ಮನೆಯ ಪಕ್ಕದಲ್ಲಿಯೇ ದೊಡ್ಡ ಅರಣ್ಯವಿದೆ. ಹಾಗಾಗಿ ಇಂಥ ಚಿತ್ರಗಳನ್ನುತೆಗೆಯುವುದು ನನಗೆ ಸುಲಭ. ಇರುವೆಯ ಮುಖದ ಚಿತ್ರ ಇಷ್ಟು ಡಿಟೇಲ್ ಆಗಿ ತೆಗೆದಾಗ ಇದನ್ನು ನಿಕಾನ್ ಸ್ಮಾಲ್ ವರ್ಲ್ಡ್ ಫೋಟೋಮೈಕ್ರೋಗ್ರಫಿ ಕಳಿಸಬಹುದು ಎಂದನಿಸಿತ್ತು. ಆದರೆ, ಪ್ರಶಸ್ತಿ ಬಂದಿದ್ದು ಖುಷಿಯಾಗಿದೆ ಎಂದಿದ್ದಾರೆ.
ಸೃಷ್ಟಿಕರ್ತ ಜಗತ್ತಿನ ಜೀವಿಗಳನ್ನು ಯಾವೆಲ್ಲಾ ರೀತಿಯಲ್ಲಿ ವಿನ್ಯಾಸ ಮಾಡಿದ್ದಾನೆ ಎನ್ನುವ ನೋಡುವ ಕುತೂಹಲ ನನಗಂತೂ ಇದೆ. ಹಾಗಾಗಿ ಈ ರೀತಿಯ ಚಿತ್ರಗಳನ್ನು ತೆಗೆಯುವುದು ನನಗೆ ಇಷ್ಟ. ಪ್ರತಿ ಪ್ರಾಣಿಗಳನ್ನು, ಕೀಟಗಳನ್ನು ಅಮೂಲಾಗ್ರವಾಗಿ ಚಿತ್ರಿಸುತ್ತೇನೆ. ಫೋಟೋಗ್ರಫಿಯ ಮೂಲ ಉದ್ದೇಶವೇ ಅನ್ವೇಷಣೆ ಎಂದು ಕವಲಿಯೌಸ್ಕಾಸ್ ಹೇಳಿದ್ದಾರೆ.
ಜನ ಸಾಮಾನ್ಯರಿಗೆ ಬಿಗ್ ಶಾಕ್ ; ಭಾರತ ಸೇರಿ ವಿಶ್ವದ್ಯಾಂತ ‘ಅಕ್ಕಿ’ ಕೊರತೆ, ಸಧ್ಯದಲ್ಲೇ ಬೆಲೆ ಏರಿಕೆ