ಹಾಸನ: ಮುಂದಿನ ಮೂರು ತಿಂಗಳು ಭಾರತ ಸೇರಿದಂತೆ ಇಡೀ ಜಗತ್ತಿಗೆ ಭಾರಿ ಕಂಟಕ ಕಾದಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
BIGG NEWS: ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವ ಅಗತ್ಯವಿಲ್ಲ; ಶೋಭಾ ಕರಂದ್ಲಾಜೆ
ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಳ್ಳಿಯಲ್ಲಿರುವ ಕೋಡಿ ಮಠದಲ್ಲಿ ಮಾತನಾಡಿದ ಅವರು, ಕಾರ್ತಿಕ, ಮಾರ್ಗಶಿರದಿಂ ತೊಡಗಿ ಜನವರಿ ಪ್ರಥಮ ಭಾಗದವರೆಗೆ ಭಾರಿ ಲೋಕ ಕಂಟಕವಿದೆ ಎಂದರು.
ಈ ಕಂಟಕಗಳು ಭೂ ಕಂಟಕದ ರೂಪದಲ್ಲಿರಬಹುದು, ಪ್ರಾದೇಶಿಕವಾಗಿಯೂ ಸಂಘರ್ಷವಿರಬಹುದು, ಪ್ರಾಕೃತಿಕಾಗಿಯೂ ಇರಬಹುದು ಎಂದ ಅವರು, ರಾಜ ಬೀದಿಯೂ ಇರಬಹುದು ಎಂದು ಹೇಳಿದರು.
BIGG NEWS: ಭಾರತದಲ್ಲಿ ಭಾರತ್ ಜೋಡೋ ಯಾತ್ರೆ ಮಾಡುವ ಅಗತ್ಯವಿಲ್ಲ; ಶೋಭಾ ಕರಂದ್ಲಾಜೆ
ಆದರೆ ರಾಜ ಬೀದಿಯ ವಿವರಣೆ ನೀಡಲಿಲ್ಲ. ಜಾಗತಿಕವಾಗಿ ಬಾಂಬ್ ಗಳು , ಭೂಕಂಪ, ಯದ್ಧ ಭೀತಿ ಇದೆ. ಇದು ಕೇವಲ ಜಗತ್ತಿಗೆ ಸಂಬಂಧಿಸಿದ್ದಲ್ಲ, ದೇಶಿಯಾಗಿ ಕೆಲವೊಂದು ಕಂಟಕಗಳಿವೆ ಎಂದು ಹೇಳಿದ್ದಾರೆ. ಜನ ಜನಗಳ ಮೇಎ ನಿಯಂತ್ರಣ ಕಳೆದುಕೊಂಡು ಹುಚ್ಚರಾಗುತ್ತಾರೆ. ಹೆಚ್ಚಿನವರಿಗೆ ದೈಹಿಕ ಅಶಕ್ತಿ ಕಾಡಲಿದೆ ಎಂದು ಹೇಳಿದ್ದಾರೆ.