ಕೆಎನ್ಎನ್ಡಿಜಿಟಲ್ ಡೆಸ್ಕ್ : ರೈಲಿನಲ್ಲಿ ನಾಲ್ವರು ಮುಸ್ಲಿಂ ಪುರುಷರು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಉತ್ತರ ಪ್ರದೇಶದ ಮಾಜಿ ಶಾಸಕ ದೀಪ್ಲಾಲ್ ಭಾರ್ತಿ ಚಿತ್ರೀಕರಿಸಿದ ವೀಡಿಯೊದಲ್ಲಿ ರೈಲು ಖಡ್ಡಾ ರೈಲ್ವೆ ನಿಲ್ದಾಣದಲ್ಲಿ ನಿಂತಾಗ ನಮಾಜ್ ಮಾಡುತ್ತಿರುವುದನ್ನ ತೋರಿಸಲಾಗಿದೆ.
ಈ ಘಟನೆ ಅಕ್ಟೋಬರ್ 20 ರಿಂದ ನಡೆದಿದೆ ಎಂದು ಭಾರ್ತಿ ಹೇಳಿದ್ದು, ಸತ್ಯಾಗ್ರಹ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ನಾಲ್ವರು ಪುರುಷರು ನಮಾಜ್ ಮಾಡುವುದನ್ನ ಮತ್ತು ಇತರ ಪ್ರಯಾಣಿಕರ ಮಾರ್ಗವನ್ನ ನಿರ್ಬಂಧಿಸುವುದನ್ನು ನೋಡಿದೆ ಎಂದು ಹೇಳಿದ್ದಾರೆ.
“ನಾನು ಈ ವಿಡಿಯೋ ಮಾಡಿದ್ದೇನೆ. ಅವರು ಸ್ಲೀಪರ್ ಕೋಚ್’ನಲ್ಲಿ ನಮಾಜ್ ಮಾಡಿದರು. ಇತರ ಪ್ರಯಾಣಿಕರಿಗೆ ರೈಲಿನೊಳಗೆ ಪ್ರವೇಶಿಸಲು ಅಥವಾ ನಿರ್ಗಮಿಸಲು ಸಾಧ್ಯವಾಗದ ಕಾರಣ ಇದು ಅನಾನುಕೂಲತೆಯನ್ನ ಉಂಟುಮಾಡಿತು. ಸಾರ್ವಜನಿಕ ಸ್ಥಳಗಳಲ್ಲಿ ಅವರು ಹೇಗೆ ನಮಾಜ್ ಮಾಡಬಹುದು? ಅದು ತಪ್ಪು” ಎಂದು ದೀಪ್ಲಾಲ್ ಭಾರ್ತಿ ಹೇಳಿದ್ದಾರೆ.
ಬೋಗಿಯ ಎರಡು ಬದಿಗಳಲ್ಲಿರುವ ಕೂಳಿತಿರುವುದ್ರಿಂದ ಜನರು ಬೋಗಿಯನ್ನು ಪ್ರವೇಶಿಸದಂತೆ ಮತ್ತು ನಿರ್ಗಮಿಸದಂತೆ ತಡೆಯುತ್ತಿದ್ದಾರೆ ಎಂದು ಮಾಜಿ ಶಾಸಕರು ಹೇಳಿದರು. ದೀಪ್ಲಾಲ್ ಭಾರ್ತಿ ಅವರು ಭಾರತೀಯ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದ್ದು, ಕ್ರಮಕ್ಕೆ ಕರೆ ನೀಡಿದ್ದಾರೆ.
ಉತ್ತರ ಪ್ರದೇಶದ ಸಾರ್ವಜನಿಕ ಸ್ಥಳದಲ್ಲಿ ನಮಾಜ್ ಮಾಡುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು, ಲಕ್ನೋದ ಲುಲು ಮಾಲ್ನಲ್ಲಿ ಜನರ ಗುಂಪೊಂದು ನಮಾಜ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವಿವಾದವೊಂದು ಭುಗಿಲೆದ್ದಿತ್ತು.