ಕೆಎನ್ ಎನ್ ನ್ಯೂಸ್ ಡೆಸ್ಕ್ : ಭಾರತದ ಸಂಪ್ರದಾಯ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ತುಂಬಾ ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ಮತ್ತು ಭಗವಾನ್ ವಿಷ್ಣುವಿನ ವಿವಾಹದ ಆಚರಣೆಯೇ ದೀಪಾವಳಿ.
BIGG NEWS: ರಾಜ್ಯದಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲ; ಸುನಿಲ್ ಕುಮಾರ್ ಸ್ಪಷ್ಟನೆ
ಅಲ್ಲದೆ, ಲಕ್ಷ್ಮಿ ದೇವಿಯು ದೀಪಾವಳಿ ಅಮಾವಾಸ್ಯೆಯ ದಿನದಂದು ಜನಿಸಿದ ಕಾರಣ ಅವಳ ಜನ್ಮ ದಿನದ ವಿಶೇಷ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡುವುದು ಹಿಂದಿನಿಂದಲೂ ಬಂದ ಪದ್ಧತಿ.
ಆದರೆ 2022ನೇ ಸಾಲಿನಲ್ಲಿ ವಿಶೇಷವಾಗಿ ದೀಪಾವಳಿ ಅಮಾವಾಸ್ಯೆಯ ದಿನವೇ ಸೂರ್ಯ ಗ್ರಹಣ ಬಂದಿದೆ. ಹಲವರಿಗೆ ಗ್ರಹಣ ಇರುವ ದಿನ ಲಕ್ಷ್ಮಿ ಪೂಜೆ ಮಾಡಬಹುದೇ, ಇಲ್ಲವೇ ಎಂಬ ಗೊಂದಲ ಇರುತ್ತದೆ. ಈ ಬಗ್ಗೆ ಜ್ಯೋತಿಷ್ಯರು ಏನು ಹೇಳಿದ್ದಾರೆ.
ದೀಪಾವಳಿ ಯಾವ ದಿನ ಯಾವ ಪೂಜೆ?
ದೀಪಾವಳಿ 2022ನೇ ಸಾಲಿನಲ್ಲಿ 23ರಂದು ಧನತ್ರಯೋದಶಿ, 24 ನರಕ ಚತುರ್ದಶಿ, 25 ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ 26ರಂದು ಬಲಿಪಾಡ್ಯಮಿ ದೀಪಾವಳಿ ಹೀಗೆ ನಾಲ್ಕು ದಿನಗಳ ಸಾಲು ಹಬ್ಬ ಇದೆ.
BIGG NEWS: ರಾಜ್ಯದಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲ; ಸುನಿಲ್ ಕುಮಾರ್ ಸ್ಪಷ್ಟನೆ
ಸೂರ್ಯಗ್ರಹಣದ ದಿನ ಹಬ್ಬ ಅಶುಭವೇ?
ಖಂಡಗ್ರಾಸ ಸೂರ್ಯಗ್ರಹಣವು 2022ನೇ ಸಾಲಿನಲ್ಲಿ ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ರಾತ್ರಿ ಅಕ್ಟೋಬರ್ 25ರಂದು ಮಂಗಳವಾರ ಸಂಭವಿಸುತ್ತಿದೆ. ಈ ದಿನ ನೆನಪಿಡಬೇಕಾದ ಅಂಶವೆಂದರೆ, ಯಾವುದೇ ಗ್ರಹಣ ಬಂದರೂ ಚಿಂತೆ ಪಡುವ ಅಗತ್ಯವಿಲ್ಲ. ಇದು ಸಿದ್ಧಿಗಳ ದೊಡ್ಡ ಹಬ್ಬವಾದ್ದರಿಂದ ಋಷಿಮುನಿಗಳು ಇದನ್ನು ಸಿದ್ಧಿಕಾಲ ಎಂದು ಹೆಸರಿಸಿದ್ದಾರೆ. ಗ್ರಹಣದ ಸಮಯದಲ್ಲಿ, ಭಗವಾನ್ ಶ್ರೀ ರಾಮನು ಗುರು ವಶಿಷ್ಠರಿಂದ ಮತ್ತು ಶ್ರೀ ಕೃಷ್ಣ ಗುರು ಸಂದೀಪನಿಂದ ದೀಕ್ಷೆ ಪಡೆದರು. ಸೂರ್ಯಾಸ್ತದ ನಂತರ ಸೂರ್ಯಗ್ರಹಣವು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ.
BIGG NEWS: ರಾಜ್ಯದಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲ; ಸುನಿಲ್ ಕುಮಾರ್ ಸ್ಪಷ್ಟನೆ
ಸೂರ್ಯ ಗ್ರಹಣದ ದಿನ ಲಕ್ಷ್ಮಿ ಪೂಜೆ ಮಾಡಬಹುದೆ?
ವೈದಿಕ ಜ್ಯೋತಿಷ್ಯದ ಪ್ರಕಾರ ಅಕ್ಟೋಬರ್ 24ರಂದು ನರಕ ಚತುರ್ದಶಿ ಇದ್ದು ಇಂದೇ ಹಬ್ಬ ಅಚರಿಸುವುದು ಶುಭ, ಮಂಗಳವಾರ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆ, ವ್ರತ ಯಾವುದನ್ನು ಮಾಡಬಾರದು ಎನ್ನಲಾಗುತ್ತದೆ, ಅದರೆ ಈ ದಿನ ಅಶುಭ ಎಂದಲ್ಲ. ಇಂದು ಸಂಜೆವರೆಗೂ ಗ್ರಹಣ ಇರುವುದರಿಂದ ಪೂಜೆ ಅಥವಾ ವ್ರತದ ಪ್ರಯೋಜನ ಸಿಗುವುದಿಲ್ಲ ಎನ್ನಲಾಗುತ್ತದೆ. ಕೇದಾರೇಶ್ವರ ನೋಮು ಅಥವಾ ದೀಪಾವಳಿ ನೋಮು ಮಾಡುವವರು ನಂತರದ ದಿನ ಬುಧವಾರ ಮಾಡುವುದು ಉತ್ತಮ ಎಂದು ವೈದಿಕ ಜ್ಯೋತಿಷ್ಯರು ಹೇಳುತ್ತಾರೆ. ಆದರೆ, ಗ್ರಹಣದ ಸಮಯದಲ್ಲಿ ದೈವ ಸ್ಮರಣೆ, ವಿಷ್ಣು ಸಹಸ್ರನಾಮ, ಮಂತ್ರ ಪಠಣೆ ಮಾಡುವುದು ಸಕಾರಾತ್ಮಕತೆಯನ್ನು ತುಂಬುತ್ತದೆ ಎನ್ನಲಾಗುತ್ತದೆ.