ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಪ್ರಧಾನಮಂತ್ರಿ ರೋಜ್ಗಾರ್ ಮೇಳ 2022ಕ್ಕೆ ಚಾಲನೆ ನೀಡಲಿದ್ದಾರೆ . ರೋಜ್ಗಾರ್ ಮೇಳದ ಮೂಲಕ, ವಿವಿಧ ಸರ್ಕಾರಿ ಇಲಾಖೆಗಳಾದ್ಯಂತ ಕನಿಷ್ಠ 10 ಲಕ್ಷ ಉದ್ಯೋಗಗಳಿಗೆ ಮೆಗಾ ನೇಮಕಾತಿ ಅಭಿಯಾನವನ್ನು ನಡೆಸಲಾಗುವುದು ಎನ್ನಲಾಗಿದೆ.
ಪ್ರಧಾನಮಂತ್ರಿ ರೋಜ್ಗಾರ್ 2022 ನೇಮಕಾತಿ ಯೋಜನೆಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಾರಂಭಿಸಲಾಗುವುದು. ಇಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಶುರುವಾಗಲಿದ್ದು, ಇದರ ಮೂಲಕ ಸುಮಾರು 75,000 ಅಭ್ಯರ್ಥಿಗಳು ವಿವಿಧ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಪತ್ರಗಳನ್ನು ಸ್ವೀಕರಿಸುತ್ತಾರೆ.
ಈ ರೋಜ್ಗರ್ ಮೇಳ 2022 ರ ಅಡಿಯಲ್ಲಿ, ಸೂಕ್ತ ಅಭ್ಯರ್ಥಿಗಳಿಗೆ ಸುಮಾರು 10 ಲಕ್ಷ ಉದ್ಯೋಗಗಳನ್ನು ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳು ಭಾರತ ಸರ್ಕಾರದ ಅಡಿಯಲ್ಲಿ 38 ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೇರಿಕೊಳ್ಳುತ್ತಾರೆ. ಅಭ್ಯರ್ಥಿಗಳಿಗೆ ಗ್ರೂಪ್ ಎ ಮತ್ತು ಬಿ (ಗೆಜೆಟೆಡ್), ಗ್ರೂಪ್ ಬಿ (ನಾನ್ ಗೆಜೆಟೆಡ್) ಮತ್ತು ಗ್ರೂಪ್ ಸಿ ಹಂತಗಳಲ್ಲಿ ಸರ್ಕಾರಿ ನೌಕ್ರಿಗಳನ್ನು ನೀಡಲಾಗುತ್ತದೆ. ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಎಲ್ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್ಪೆಕ್ಟರ್ಗಳು, ಎಂಟಿಎಸ್ ಮತ್ತು ಇನ್ನೂ ಹೆಚ್ಚಿನ ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.