ಬೆಂಗಳೂರು : ಅಕ್ಟೋಬರ್ 26 ರ ಬಲಿಪಾಡ್ಯಮಿ ದಿನ ರಾಜ್ಯದ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಗೋವುಗಳ ಪೂಜೆ ಮಾಡುವಂತೆ ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಆದೇಶಿಸಿದ್ದಾರೆ.
BIGG NEWS : ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಅಪ್ಪು ಆ್ಯಂಬುಲೆನ್ಸ್ ಸೇವೆ’ ಆರಂಭ : ನಟ ಪ್ರಕಾಶ್ ರೈ ಘೋಷಣೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ದೀಪಾವಳಿಯ ಬಲಿಪಾಡ್ಯಮಿಯಂದು ಗೋಮಾತೆ ಪೂಜೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಅಕ್ಟೋಬರ್ 26 ರಂದು ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಗೋ ಪೂಜೆ ಹಮ್ಮಿಕೊಂಡಿರುವಂತೆ ಪಶುಸಂಗೋಪನೆ ಇಲಾಖೆಯ ಎಲ್ಲಾ ಪಶುವೈದ್ಯ ಸಂಸ್ಥೆಗಳು, ಜಾನುವಾರು ಕ್ಷೇತ್ರಗಳು, ರಾಜ್ಯದ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಲ್ಲಿ ಹಮ್ಮಿಕೊಂಡಿರುವ ಗೋಪೂಜೆ ಕಾರ್ಯಕ್ರಮಗಳಲ್ಲಿ ಶಾಸಕರು, ಸಂಸತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
Good News : ನಿರುದ್ಯೋಗಿಗಳಿಗೆ ಪ್ರಧಾನಿ ಮೋದಿ `ಬಂಪರ್ ಗಿಫ್ಟ್’ : ಇಂದು 75 ಸಾವಿರ ಮಂದಿಗೆ ನೇಮಕಾತಿ ಪತ್ರ