ಕೆಎನ್ಎನ್ಡಿಜಿಟಲ್ ಡೆಸ್ಕ್ : ಉದ್ದೀಪನ ಮದ್ದು ಸೇವನೆ ಧೃಡಪಟ್ಟ ಹಿನ್ನೆಲೆಯಲ್ಲಿ ವಿಶ್ವದ ಮಾಜಿ ನಂ.1 ಆಟಗಾರ್ತಿ ಸಿಮೋನಾ ಹ್ಯಾಲೆಪ್ ಅಮಾನತುಗೊಳಿಸಲಾಗಿದೆ.
ನಿಷೇಧಿತ ವಸ್ತುವಿಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ ಎಂದು ಅಂತರರಾಷ್ಟ್ರೀಯ ಟೆನಿಸ್ ಸಮಗ್ರತೆ ಸಂಸ್ಥೆ (ITIA) ಶುಕ್ರವಾರ ತಿಳಿಸಿದೆ.
“2022 ರ ಟೆನಿಸ್ ಉದ್ದೀಪನ ಮದ್ದು ತಡೆ ಕಾರ್ಯಕ್ರಮದ (TADP) ಅನುಚ್ಛೇದ 7.12.1ರ ಅಡಿಯಲ್ಲಿ 31 ವರ್ಷದ ರೊಮೇನಿಯಾದ ಟೆನಿಸ್ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಅವರನ್ನ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ” ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.