ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳಿಗೆ ಮತ್ತೆ ಕೋರ್ಟ್ ಶಾಕ್ ನೀಡಿದ್ದು, ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಿದೆ.
ಇದರ ನಡುವೆ ಮಕ್ಕಳ ರಕ್ಷಣಾ ನಿರ್ದೇಶನಾಲಯ ಚಿತ್ರದುರ್ಗದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ಮಕ್ಕಳ ಸಮಾಲೋಚನೆ ನಡೆಸಲು ಸೂಚನೆ ನೀಡಿದೆ. ಮುರುಘಾ ಮಠದ ಪ್ರಕರಣದ ಬಳಿಕ 103 ಮಕ್ಕಳಲ್ಲೂ ಆತಂಕ ಮನೆ ಮಾಡಿದೆ. ಎಲ್ಲಾ ಮಕ್ಕಳನ್ನೂ ಕೌನ್ಸೆಲಿಂಗ್ ನಡೆಸಿ ನವೆಂಬರ್ 30ರೊಳಗೆ ವರದಿ ನೀಡಬೇಕು ಎಂದು ಆದೇಶ ನೀಡಲಾಗಿದೆ.
ಫೋಕ್ಸೋ ಕೇಸ್ನಲ್ಲಿ ಮುರುಘಾ ಜೈಲು ಸೇರಿದ ಮೇಲೆ ಮಠದ ಹಾಸ್ಟೆಲ್ನಲ್ಲಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 103 ವಿದ್ಯಾರ್ಥಿನಿಯರನ್ನ ಶಿಫ್ಟ್ ಮಾಡಲಾಗಿತ್ತು. 49 ವಿದ್ಯಾರ್ಥಿನಿಯರನ್ನು ಮಕ್ಕಳ ರಕ್ಷಣಾ ಘಟಕಗಳ ಆಯಾ ಜಿಲ್ಲೆಗಳಿಗೆ ಕಳುಹಿಸಿದ್ರೆ, 54 ವಿದ್ಯಾರ್ಥಿನಿಯರನ್ನು ಪೋಷಕರ ಜೊತೆ ಕಳಿಸಿದ್ದರು. ಈಗ ಎಲ್ಲರನ್ನೂ ಕೌನ್ಸೆಲಿಂಗ್ ನಡೆಸಬೇಕಿದೆ.
ಮುರುಘಾಶ್ರೀಗಳ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಪೊಲೀಸರು ಚಿತ್ರದುರ್ಗದ ಜಿಲ್ಲಾ 2 ನೇ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಮುರುಘಾಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 3ರವರೆಗೆ ವಿಸ್ತಿರಿಸಿ ಆದೇಶ ಹೊರಡಿಸಿದೆ. ಲೈಂಗಿಕ ದೌರ್ಜನ್ಯ ಪೋಕ್ಸೋ ಪ್ರಕರಣದಲ್ಲಿ ಮುರುಘಾಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಮುರುಘಾಶರಣರನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಈಗಾಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದ ಶ್ರೀಗಳಿಗೆ ಇದೀಗ ಮತ್ತೆ ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
‘ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಒಟ್ಟಿಗೆ ಹೋಗಲು ಸಾಧ್ಯವಿಲ್ಲ’ : ಇಂಟರ್ಪೋಲ್ ಸಭೆಯಲ್ಲಿ ಅಮಿತ್ ಅಮಿತ್ ಶಾ