ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಇಂದು ಪುನೀತ್ ರಾಜ್ಕುಮಾರ್ ನೆನಪಿನ ‘ಪುನೀತ ಪರ್ವ’ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ನಗರ ಪೊಲೀಸರು ಟ್ರಾಫಿಕ್ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
BIGG BREAKING NEWS : ಮುರುಘಾಶ್ರೀಗಳಿಗೆ ಜೈಲೇ ಗತಿ : ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ಈ ಕುರಿತು ಸಂಚಾರ ವಿಭಾಗದ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಮಾಹಿತಿ ನೀಡಿದ್ದಾರೆ. ‘ಅರಮನೆ ಸುತ್ತಮುತ್ತ ಯಾವುದೇ ಮಾರ್ಗ ಬದಲಾವಣೆ ಇಲ್ಲ. ನಗರದಲ್ಲಿ ಯಾವುದೇ ರಸ್ತೆಗಳನ್ನು ಬಂದ್ ಮಾಡುವುದಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಭಾಗಿಯಾಗುವ ಸಾಧ್ಯತೆ ಇರುವುದರಿಂದ ಸಂಚಾರ ದಟ್ಟಣೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ.
BIGG BREAKING NEWS : ಮುರುಘಾಶ್ರೀಗಳಿಗೆ ಜೈಲೇ ಗತಿ : ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆ
ಅಭಿಮಾನಿಗಳು ಹಾಗೂ ಸಾರ್ವಜನಿಕರ ಆಗಮನಕ್ಕೆ ಹಲವು ಮಾರ್ಗಗಳನ್ನು ಪೊಲೀಸರು ಗುರುತಿಸಿದ್ದಾರೆ. ಮೈಸೂರು ರಸ್ತೆಯ ಕಡೆಯಿಂದ ಬರುವ ವಾಹನಗಳು ನಾಯಂಡನಹಳ್ಳಿ ಜಂಕ್ಷನ್, ಸುಮ್ಮುನಹಳ್ಳಿ ಸೇತುವೆ, ರಾಜಕುಮಾರ್ ಸಮಾಧಿ, ಗೊರಗುಂಟೆಪಾಳ್ಯ ಜಂಕ್ಷನ್, ಬಿಇಎಲ್ ಸೇತುವೆ, ಹೆಬ್ಬಾಳ ಮೇಲ್ಸೇತುವೆ ಮೆಕ್ರಿ ಸರ್ಕಲ್ ಮಾರ್ಗವಾಗಿ ಅರಮನೆ ಮೈದಾನ ತಲುಪಬೇಕೆಂದು ಸೂಚಿಸಲಾಗಿದೆ.