ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೆಲವರು ತಮ್ಮ ಬುದ್ದಿವಂತಿಕೆಯಿಂದ ಎಂತದ್ದೇ ಕಠಿಣ ಕೆಲಸಗಳನ್ನು ತುಂಬಾ ಸುಲಭವಾಗಿ ಫಟಾ ಪಟ್ ಅಂತಾ ಮಾಡ್ಬಿಡ್ತಾರೆ. ಇದಕ್ಕೆ ಈಗ ವೈರಲ್ ಆಗ್ತಿರೋ ವಿಡಿಯೋನೇ ಸಾಕ್ಷಿ.
ಇಲ್ಲಿ ವ್ಯಕ್ತಿಯೊಬ್ಬ ಟ್ರಕ್ವೊಂದಕ್ಕೆ ತನ್ನ ಟ್ರಿಕ್ ಉಪಯೋಗಿಸಿ ಟೊಮೆಟೊವನ್ನು ಲೋಡ್ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಕೊಯ್ಲು ಮಾಡಿದ ಟೊಮೆಟೊವನ್ನು ನಿಲ್ಲಿಸಿರುವ ಟ್ರಕ್ಗೆ ಬಕೆಟ್ ಮೂಲಕ ಲೋಡ್ ಮಾಡಿದ್ದಾನೆ. ಬಕೆಟ್ ಮೂಲಕ ಎಸೆದ ಟೊಮೆಟೊ ಟ್ರಕ್ ಒಳಗೆ ಹೋದರೆ, ಬಕೆಟ್ ನೆಲದ ಮೇಲೆ ಬೀಳುವುದನ್ನು ನೋಡಬಹುದು. ಈ ಮೂಲಕ ಆತ ತನ್ನ ಕೆಲಸವನ್ನು ಸುಲಭವಾಗಿಸಿದ್ದಾನೆ.
Power of Arnold, brain of Einstein pic.twitter.com/3W0dL3c1Dt
— Sagar (@sagarcasm) October 18, 2022
ಸಾಗರ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ವೀಡಿಯೋ ಜೊತೆಗೆ “ಪವರ್ ಆಫ್ ಅರ್ನಾಲ್ಡ್, ಬ್ರೈನ್ ಆಫ್ ಐನ್ಸ್ಟೈನ್” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ಈ ವಿಡಿಯೋವನ್ನು ವೀಕ್ಷಿಸಿದ ನೆಟ್ಟಿಗರು ವ್ಯಕ್ತಿಯ ಟ್ರಿಕ್ಗೆ ಫಿದಾ ಆಗಿದ್ದಾರೆ.
BIG NEWS: ಬೇಹುಗಾರಿಕೆ ಶಂಕೆ: ದೆಹಲಿಯಲ್ಲಿ ನೇಪಾಳಿ ಸನ್ಯಾಸಿಯಂತೆ ವಾಸಿಸುತ್ತಿದ್ದ ಚೀನಾ ಮಹಿಳೆ ಅರೆಸ್ಟ್
BIGG NEWS : ಸುರತ್ಕಲ್ ಟೋಲ್ ಗೇಟ್ ವಿವಾದ : ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು