ಮಂಡ್ಯ: ಮಳ್ಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಕೀಚಕನಿಗೆ ತಾನು ಮಾಡಿರುವ ತಪ್ಪಿನ ಪಶ್ಚಾತ್ತಾಪವಾಗುತ್ತಿದೆ.
BIGG NEWS : ಸುರತ್ಕಲ್ ಟೋಲ್ ಗೇಟ್ ವಿವಾದ : ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು
ಪೊಲೀಸರ ಮುಂದೆ ನಾನು ಬದುಕಲ್ಲ, ಸತ್ತು ಹೋಗುತ್ತೇನೆ ಎಂದು ಆ ಕಡುಪಾಪಿ ಹೇಳುತ್ತಾ ಇದ್ದಾನೆ.
ಅಕ್ಟೋಬರ್ 11 ರಂದು ಮಂಡ್ಯ ಜಿಲ್ಲೆಯಲ್ಲಿ ಟ್ಯೂಷನ್ಗೆ ಹೋಗಿದ್ದ 10 ವರ್ಷದ ಬಾಲಕಿಯ ಮೇಲೆ ಟ್ಯೂಷನ್ನ ಮೇಲ್ವಿಚಾರಕ ಕಾಂತರಾಜು ಎಂಬ ಕಾಮ ಪಿಶಾಚಿ ಲೈಂಗಿಕ ದೌರ್ಜನ್ಯವೆಸಗಿ ಅಮಾನುಷವಾಗಿ ಕೊಲೆ ಮಾಡಿದ್ದನು. ಈ ಪ್ರಕರಣ ಜರುಗಿದ 24 ಗಂಟೆಯ ಒಳಗೆ ಕಾಂತರಾಜುನನ್ನು ಪೊಲೀಸರು ಬಂಧಿಸಿದ್ದರು.
BIGG NEWS : ಸುರತ್ಕಲ್ ಟೋಲ್ ಗೇಟ್ ವಿವಾದ : ಹೋರಾಟಗಾರರ ಮೇಲೆ ಎಫ್ಐಆರ್ ದಾಖಲು
ಕಾಂತರಾಜು ಎಸಗಿರುವ ಅಮಾನುಷ ಕೃತ್ಯವನ್ನು ಇಡೀ ಜಿಲ್ಲೆಯೇ ಖಂಡಿಸಿತು. ಆತ ಎಸಗಿರುವ ಕೃತ್ಯ ಕ್ಷಮಿಸಲು ಆಗದಂತಹದ್ದು, ಆತನನ್ನು ಗಲ್ಲಿಗೆ ಏರಿಸಬೇಕು. ಪುಟ್ಟಕಂದಮ್ಮನ ಆತ್ಮಕ್ಕೆ ಶಾಂತಿ ದೊರಕಬೇಕೆಂದ್ರೆ ಇವನ್ನು ಜೀವಂತ ಬಿಡಬಾರದೆಂದು ಆಕ್ರೋಶ ವ್ಯಕ್ತವಾಗಿದ್ದವು. ಅಲ್ಲದೇ ಬಾಲಕಿಯ ತಂದೆ-ತಾಯಿ ಕೂಡ ಸರ್ಕಾರ ಕಠಿಣ ಶಿಕ್ಷೆ ನೀಡಬೇಕಂದು ಒತ್ತಾಯಿಸಿದ್ದರು.