ಬೆಂಗಳೂರು : ದೀಪಾವಳಿ ಸಂಭ್ರಮ ಭರದಲ್ಲಿ ʼಹಸಿರು ಪಟಾಕಿ ʼ ಹಚ್ಚೋ ಬಗ್ಗೆ ನಿರ್ಲಕ್ಷ್ಯಿಸದಿರಿ, ಸಿಲಿಕಾನ್ ಸಿಟಿಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಎಂದೇ ಖ್ಯಾತಿ ಪಡೆದ ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ಎಚ್ಚರಿಕೆ ನೀಡಿದ್ದಾರೆ
BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ
ದೇಶದಲ್ಲಿ ದೀಪಗಳ ಹಬ್ಬ ದೀಪಾವಳಿ ಸಂಭ್ರಮ ಭರದಿಂದ ಸಿದ್ಧತೆ ನಡೆಸಲಾಗುತ್ತಿದೆ. ದೀಪಾವಳಿ ಹಬ್ಬದ ಭರದಲ್ಲಿ ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಪಟಾಕಿ ಹಚ್ಚೋವಾಗ ಹಸಿರು ಪಟಾಕಿಯ ಬಳಕೆಯಿಂದ ಯಾವುದೇ ಅನಾಹುತ ಎದುರಾಗಲ್ಲ ಅನ್ನೋದು ಮಾತಿಗೆ. ಯಾವುದೇ ಕಾರಣಕ್ಕೂ ಹಸಿರು ಪಟಾಕಿ ಬಳಕೆಯ ಬಗ್ಗೆಯೂ ನಿರ್ಲಕ್ಷ್ಯಿಸದಿರಿ..
ಹಸಿರು ಪಟಾಕಿಯಿಂದ ಹೆಚ್ಚು ಹಾನಿಯಾಗದು ಎಂಬ ಮನೋಭಾವ ಬೇಡ. ಹಸಿರು ಪಟಾಕಿಗಳೂ ರಾಸಾಯನಿಕ ಒಳಗೊಂಡಿವೆ. ಇದರಿಂದ ಅಪಾಯವಿಲ್ಲಎಂದು ಯಾವುದೇ ಅಧ್ಯಯನ ತಿಳಿಸಿಲ್ಲ. ಹೀಗಾಗಿ, ಪಟಾಕಿ ಸಿಡಿಸುವಾಗ ಜಾಗರೂಕರಾಗಿರಬೇಕು ಎಂದು ಮಿಂಟೋ ಕಣ್ಣಾಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.
ಮಿಂಟೊ ಆಸ್ಪತ್ರೆ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷವೂ ದೀಪಾವಳಿ ಸಂದರ್ಭದಲ್ಲಿ ಸರಾಸರಿ 50ರಿಂದ 60 ಜನರು ಕಣ್ಣಿನ ಚಿಕಿತ್ಸ್ಸೆಗಾಗಿ ದಾಖಲಾಗುತ್ತಾರೆ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕಣ್ಣಿಗೆ ತೊಂದರೆಯಾಗಿ ಆಸ್ಪತ್ರೆಗೆ ದಾಖಲಾಗುವವರಲ್ಲಿ 14 ವರ್ಷದೊಳಗಿನ ಮಕ್ಕಳು ಶೇ.40 ರಷ್ಟಿರುತ್ತಾರೆ. ಅದರಲ್ಲೂ, ಗಂಡುಮಕ್ಕಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿರುತ್ತದೆ ಎಂದರು.
BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ
ಇನ್ನು ಕಳೆದ ವರ್ಷ 40ಕ್ಕೂ ಅಧಿಕ ಮಂದಿ ಮಿಂಟೋ ಕಣ್ಣಾಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ12 ವರ್ಷದೊಳಗಿನವರು 12 ಮಂದಿ ಚಿಕಿತ್ಸೆಗೊಳಗಾಗಿದ್ದರು. ಇವರಲ್ಲಿಇಬ್ಬರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾರೆ. ಪಟಾಕಿ ಸಿಡಿಸುವಾಗ ಮೈ ಮರೆಯಬೇಡಿ. ಒಂದು ವೇಳೆ ಗಾಯಗೊಂಡರೂ ತಕ್ಷಣ ಪ್ರಾಥಮಿಕ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು. ಅಲ್ಲದೇ ದೀಪಾವಳಿ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸ್ಪತ್ರೆಯ ವೈದ್ಯರು, ವೈದ್ಯಯೇತರ ಸಿಬ್ಬಂದಿಗಳು ರಜೆ ತೆಗೆದುಕೊಳ್ಳದೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಪಟಾಕಿ ಸಿಡಿಸುವಾಗ ಏನು ಮಾಡಬೇಕು?
ಪಟಾಕಿ ಸಿಡಿಸುವಾಗ ಮುಖವನ್ನು ದೂರವಿಟ್ಟುಕೊಳ್ಳಬೇಕು.
ಐದು ವರ್ಷದೊಳಗಿನ ಮಕ್ಕಳ ಕೈಗೆ ಪೋಷಕರು ಪಟಾಕಿ ಕೊಡಬಾರದು.
ಮನೆ ಮತ್ತು ವಾಹನ ನಿಲುಗಡೆ ಸ್ಥಳದಲ್ಲಿ ಪಟಾಕಿ ಸುಡಬಾರದು.
ಸುಟ್ಟ ಪಟಾಕಿಗಳನ್ನು ಮನಬಂದಂತೆ ಬಿಸಾಡಬಾರದು.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಗಿಂತ ಹೆಚ್ಚಾಗಿ ದೊಡ್ಡವರೇ ಪಟಾಕಿ ಸಿಡಿಸುತ್ತಾರೆ. ಪ್ರತಿ ವರ್ಷ ದೇಶದಲ್ಲಿ ಅನೇಕ ಜನ ಪಟಾಕಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೆಷ್ಟೊ ಜನರು ಶಾಶ್ವತ ಅಂಧತ್ವಕ್ಕೆ ತುತ್ತಾಗುತ್ತಿದ್ದಾರೆ. ಇವರಿಗೆಲ್ಲ ಸರಕಾರದಿಂದಾಗಲಿ ಇನ್ನಿತರ ಕಡೆಗಳಿಂದಾಗಲಿ ಯಾವುದೇ ಪರಿಹಾರ ದೊರೆಯುವುದಿಲ್ಲ.
BIGG NEWS : ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಶಿಕ್ಷಕರ ನೇಮಕಾತಿಗೆ `ಕಟ್ ಅಫ್ ಮಾರ್ಕ್ಸ್’ ಇಳಿಕೆ