ಚಾಮರಾಜನಗರ: ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಇಂದು ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶರಾದ ಭಾರತಿ ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಚವಿರಿಸಿ ಗೌರವ ಸಮರ್ಪಿಸಿದರು.
ಪೊಲೀಸರು ಹಬ್ಬ ಹರಿದಿನ ಎನ್ನದೇ ತಮ್ಮಸಂತೋಷತ ಬದಿಗಿಟ್ಟು ಕಾರ್ಯ ನಿರ್ವಹಿಸುತ್ತಾರೆ. ಅವರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರ ಅವರು ಇದೆ ಸಂದರ್ಭದಲ್ಲಿ ಹುತಾತ್ಮರ ನೆನೆದರು.
ಕರ್ತವ್ಯದಲ್ಲಿದ್ದ ಸಮಯದಲ್ಲಿ ಮೃತಪಟ್ಟವರ ಗೌರವರ್ಪಣೆ ಸಲ್ಲಿಸಲು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮ ಪೊಲೀಸರಿಗೆ ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಸ್ಪಿ ಶಿವಕುಮಾರ್ ಅವರು ಜಿಲ್ಲೆಯಲ್ಲಿ ಹುತಾತ್ಮರಾದ 11 ಆರಕ್ಷಕರು ಸೇರಿದಂತೆ 264 ಮಂದಿ ಹುತಾತ್ಮರಾದ ಆರಕ್ಷಕರ ನಾಮವಾಚನ ಮಾಡಿದರು. ಜಿಲ್ಲಾದಿಕಾರಿ ಚಾರುಲತಾ ಸೋಮಾಲ್,ಅಪರ ಜಿಲ್ಲಾದಿಕಾರಿ ಕಾತ್ಯಯಿನಿ,ಬಂಡಿಪುರ ಅರಣ್ಯಾದಿಕಾರಿ ರಮೇಶ್ ಕುಮಾರ್. ಜಿ.ಪಂ.ಸಿಇಓ ಗಾಯತ್ರಿ.. ಎಎಸ್ಪಿ ಸುಂದರರಾಜು,ಡಿವೈಸ್ಪಿ ಪ್ರಿಯದರ್ಶಿನಿ ಶ್ಯಾನಿಕೊಪ್ಪ, ನಾಗರಾಜು ಹಾಗೂ ಜಿಲ್ಲೆಯ ವೃತ್ತ ಆರಕ್ಷಕರು ಸೇರಿದಂತೆ ಇತರರು ಹಾಜರಿದ್ದರು.
ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ