ಬೆಂಗಳೂರು: ಮದುವೆ ಆಮಿಷವೊಡ್ಡಿ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದ ಸಬ್ಇನ್ಸ್ಪೆಕ್ಟರ್ ಬಂಧನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಐಡಿ ಘಟಕದಲ್ಲಿ ಇರುವ ಡಿಟೆಕ್ಟಿವ್ ಸಬ್ಇನ್ಸ್ಪೆಕ್ಟರ್ ಬಂಧಿತ ಆರೋಪಿಯಾಗಿದ್ದು, ಈತನ ವಿರುದ್ದ ದೂರು ದಾಖಲಾದ ಹಿನ್ನಲೆಯಲ್ಲಿ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿಂದ ಡಿಟೆಕ್ಟಿವ್ ಸಬ್ಇನ್ಸ್ಪೆಕ್ಟರ್ ಕಲಬುರಗಿಗೆ ಹೋಗಿದ್ದ ವೇಳೆಯಲ್ಲಿ ಯುವತಿ ಜೊತೆ ಪರಿಚಯವಾಗಿ, ಪರಿಚಯ ಪ್ರೇಮವಾಗಿ, ಪ್ರೇಮ ಲಾಡ್ಜ್ ರೂಮ್ನೊಳಗೆ ಕೊನೆಯಾಗಿದೆ. ಇದೇ ವೇಳೆ ಯುವತಿ ಲಾಡ್ಡ್ ಸಾಕು ಮನೆ ಬೇಕು, ಮದುವೆ ಆಗು ಅಂತ ಒತ್ತಾಯ ಮಾಡಿದ ವೇಳೆಯಲ್ಲಿ ಸಬ್ಇನ್ಸ್ಪೆಕ್ಟರ್ ನಿರಾಕರಿಸಿದ್ದಾರೆ. ಈ ವೇಳೆ ಲಾಡ್ಜ್ನಲ್ಲಿ ಸಂಸಾರ ಮಾಡೋ ಬದಲು ಮದುವೆಯಾಗಿ ಮನೆಯಲ್ಲಿ ಸಂಸಾರ ಮಾಡು ಅಂತ ಕೇಳದ ಸಬ್ಇನ್ಸ್ಪೆಕ್ಟರ್ ವಿರುದ್ದ , ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಯುವತಿ ದೂರು ನೀಡಿದ್ದಾಳೆ. ಈ ನಡುವೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ ಹಿನ್ನಲೆಯಲ್ಲಿ, ಎಫ್ಐಆರ್ ದಾಖಲಿಸಿದ ಬಸವನಗುಡಿ ಮಹಿಳಾ ಠಾಣೆ ಪೊಲೀಸರು, ಸಿಐಡಿ ಆವರಣದಲ್ಲಿ ಕರ್ತವ್ಯದಲ್ಲಿದ್ದ ಡಿಟೆಕ್ಟಿವ್ ಸಬ್ಇನ್ಸ್ಪೆಕ್ಟರ್ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.