ಕೆಎನ್ಎನ್ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದ ಸರ್ಕಾರವು ಔಷಧಿಗಳ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿರುವಂತೆ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಿರಪ್ ಮತ್ತು ದ್ರವ ಔಷಧಗಳನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸುಮಾರು ಕೆಲವು ತಿಂಗಳ ಹಿಂದೆ ಮಕ್ಕಳಲ್ಲಿ ಕಿಡ್ನಿ ಸಮಸ್ಯೆಗಳು ಉದ್ಭವಿಸಿದ್ದು, ಇದರಿಂದಾಗಿ 99 ಮಕ್ಕಳು ಸಾವನ್ನಪ್ಪಿದರು. ಈ ನಿಟ್ಟಿನಲ್ಲಿ ಇಂಡೋನೇಷ್ಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಿರಪ್’ನಿಂದ 99 ಮಕ್ಕಳು ಸಾವು
ಅಧಿಕೃತ ಮೂಲಗಳ ಪ್ರಕಾರ, ಇಂಡೋನೇಷ್ಯಾದಲ್ಲಿ ಮಕ್ಕಳು ಸಿರಪ್ ಬಳಸುತ್ತಿದ್ದಾಗ, ಅವರಿಗೆ ಮೂತ್ರಪಿಂಡದ ಸಮಸ್ಯೆ ಶುರುವಾಗಿದ್ದು, ಈ ಕಾರಣದಿಂದಾಗಿ ಸುಮಾರು 99 ಮಕ್ಕಳು ಸಾವನ್ನಪ್ಪಿದ್ದಾರೆ. ಅದಕ್ಕಾಗಿಯೇ ಸರ್ಕಾರವು ದ್ರವ ಪದಾರ್ಥಗಳನ್ನ ಸಂಪೂರ್ಣವಾಗಿ ನಿಷೇಧಿಸಿದೆ. ಈ ಮಾಹಿತಿಯನ್ನ ಆರೋಗ್ಯ ಸಚಿವಾಲಯ ಹಂಚಿಕೊಂಡಿದೆ. ಜನವರಿಯಿಂದಲೇ ಮಕ್ಕಳ ಸಾವಿನ ಸಂಖ್ಯೆ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಈ ದಿಟ್ಟ ಕ್ರಮ ಕೈಗೊಂಡಿದೆ.
ಆರೋಗ್ಯ ಸಚಿವಾಲಯ ಸಲಹೆ ನೀಡಿದೆ
ಈ ವಿಷಕಾರಿ ಸಿರಪ್ ಬಗ್ಗೆ, ಆರೋಗ್ಯ ಸಚಿವಾಲಯವು ಯಾವುದೇ ಆಸ್ಪತ್ರೆ ಮತ್ತು ವೈದ್ಯರು ರೋಗಿಗಳಿಗೆ ಸಿರಪ್ ಅಥವಾ ದ್ರವ ಪದಾರ್ಥವನ್ನ ಶಿಫಾರಸು ಮಾಡಬಾರದು ಎಂದು ಆದೇಶ ಹೊರಡಿಸಿದೆ. ಇನ್ನು ಈ ಸಿರಪ್ಗಳನ್ನು ಸಂಪೂರ್ಣವಾಗಿ ತನಿಖೆ ಮಾಡದವರೆಗೆ, ಈ ಸಿರಪ್ ಮಾರಾಟವನ್ನು ನಿಷೇಧಿಸಬೇಕು ಎಂದು ಹೇಳಿದರು.