ನವದೆಹಲಿ: ಭೂಗತ ಪಾತಕಿ ಮತ್ತು 1993ರ ಮುಂಬೈ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದು, ಗೌಪ್ಯ ದಾಖಲೆಗಳು ಬಹಿರಂಗಪಡಿಸಿವೆ. ಈ ದಾಖಲೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಅಧಿಕಾರಿಗಳು ಮತ್ತು ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ನಡುವಿನ ಭೇಟಿಯನ್ನ ದೃಢಪಡಿಸುತ್ತವೆ.
ಕರಾಚಿಯ ಕ್ಲಿಫ್ಟನ್ ಟವರ್ನಲ್ಲಿರುವ ಐಎಸ್ಐ ಸೇಫ್ ಹೌಸ್ನಲ್ಲಿ ನಡೆದ ಸಭೆಯಲ್ಲಿ, ಪಾಕಿಸ್ತಾನದ ಗುಪ್ತಚರ ಅಧಿಕಾರಿಗಳು ದಾವೂದ್ಗೆ ಭಾರತದಲ್ಲಿ ಭೂಗತ ಜಗತ್ತು ಮತ್ತು ಭಯೋತ್ಪಾದನೆಯ ಜಾಲವನ್ನ ಮರು-ಸ್ಥಾಪಿಸುವಂತೆ ಕೇಳಿಕೊಂಡರು ಎನ್ನಲಾಗ್ತಿದೆ.
ಗೌಪ್ಯ ದಾಖಲೆಯಲ್ಲಿ ದಾವೂದ್ ಮತ್ತು ಐಎಸ್ಐ ಅಧಿಕಾರಿಗಳ ನಡುವಿನ ಭೇಟಿಯ ಸಂಪೂರ್ಣ ವಿವರಗಳಿವೆ ಎಂದ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಇದಲ್ಲದೆ, ಭಾರತೀಯ ತನಿಖಾ ಸಂಸ್ಥೆಗಳು ದಾವೂದ್ ಇಬ್ರಾಹಿಂ ಮತ್ತು ಅವನ ಹಿಂಬಾಲಕರ ನಡುವಿನ ಸಂಭಾಷಣೆಗಳ ಪ್ರತಿಗಳನ್ನ ಸಹ ಹೊಂದಿವೆ. ಭಾರತದಲ್ಲಿ ಭೂಗತ ಲೋಕವನ್ನ ಪುನರುಜ್ಜೀವನಗೊಳಿಸಲು ಐಎಸ್ಐ ದಾವೂದ್’ಗೆ ಸೂಚಿಸಿದೆ. ಇನ್ನೀದು ಇದು ಪ್ರಮುಖ ದಾಳಿ ನಡೆಸಲು ಯೋಜಿಸಿದೆ, ಇದಕ್ಕಾಗಿ ಸಮುದ್ರ ಮಾರ್ಗದ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನ ಕಳುಹಿಸುವ ಯೋಜನೆ ಇದೆ ಎಂದು ವರದಿಯಾಗಿದೆ.
ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕನಿಗೆ ಕರಾಚಿಯಲ್ಲಿ ಪಾಕಿಸ್ತಾನ ಆಶ್ರಯ ನೀಡಿದ್ದು, ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಅಂದ್ಹಾಗೆ, ಅಕ್ಟೋಬರ್ 18 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಇಂಟರ್ ಪೋಲ್ ಸಭೆಯಲ್ಲಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇದ್ದಾನೆ ಎಂಬುದಕ್ಕೆ ಭಾರತ ಬಲವಾದ ಪುರಾವೆಗಳನ್ನ ಪ್ರಸ್ತುತಪಡಿಸಿತು. ಈ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳು ಸಹ ಹಾಜರಿದ್ದರು.