ಗುಜರಾತ್ : ಗುಜರಾತ್ ಶೀಘ್ರದಲ್ಲೇ ತನ್ನ ಮೊದಲ ವಿಮಾನ ತಯಾರಿಕಾ ಘಟಕವನ್ನು ಹೊಂದಲಿದೆ. ಗುಜರಾತ್ನಲ್ಲಿ ಶೀಘ್ರದಲ್ಲೇ ವಿಮಾನಗಳನ್ನು ತಯಾರಿಸಲಾಗುವುದು ಮತ್ತು ರಾಜ್ಯದ ರಾಜ್ಕೋಟ್ನಲ್ಲಿ ಬಿಡಿಭಾಗಗಳನ್ನು ತಯಾರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರಿಗೆ ವಸತಿ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ ನಂತರ ರಾಜ್ಕೋಟ್ನ ರೇಸ್ ಕೋರ್ಸ್ ಪ್ರದೇಶದಲ್ಲಿ ಜನರನ್ನುದ್ದೇಶಿಸಿ ಈ ಮಾತುಗಳನ್ನಾಡಿದ್ದಾರೆ. ಮೋದಿ ಎರಡು ದಿನಗಳ ಕಾಲ ಗುಜರಾತ್ ಪ್ರವಾಸಲ್ಲಿದ್ದಾರೆ.
ತಮ್ಮ ಭಾಷಣದಲ್ಲಿ ರಾಜ್ಕೋಟ್ ಜಿಲ್ಲೆಯ ಎಂಜಿನಿಯರಿಂಗ್ ಉದ್ಯಮವನ್ನು ಶ್ಲಾಘಿಸಿದ ಮೋದಿ, “ವಿಮಾನಗಳನ್ನು ಶೀಘ್ರದಲ್ಲೇ ಗುಜರಾತ್ನಲ್ಲಿ ತಯಾರಿಸಲಾಗುವುದು ಮತ್ತು ಅವುಗಳ ಬಿಡಿ ಭಾಗಗಳನ್ನು ರಾಜ್ಕೋಟ್ನಲ್ಲಿ ತಯಾರಿಸಲಾಗುವುದು” ಎಂದು ಹೇಳಿದರು. ಕೆಲ ನಾಯಕರು ರಾಜಕೀಯಕ್ಕೆ ಬಂದ ನಂತರ ತಮಗಾಗಿ ಬಂಗಲೆಗಳನ್ನು ನಿರ್ಮಿಸಿಕೊಂಡರು. ಆದರೆ, ಬಡವರಿಗಾಗಿ ಏನನ್ನೂ ಮಾಡಿಲ್ಲ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಈ ಮಾತುಗಳನ್ನಾಡಿದ್ದಾರೆ.
BIGG NEWS: ಹಾಸನಾಂಬೆ ದರ್ಶಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
BIG NEWS: ಇರಾನ್ನಲ್ಲಿ ಮತ್ತೊಂದು ಅಮಾನವೀಯ ಕೃತ್ಯ: ಭದ್ರತಾ ಪಡೆಗಳಿಂದ ಥಳಿಸಲ್ಪಟ್ಟ ಶಾಲಾ ವಿದ್ಯಾರ್ಥಿನಿ ಸಾವು