ಇರಾನ್: ಇರಾನ್ನಲ್ಲಿ ಮತ್ತೊಂದು ಕ್ರೂರ ಘಟನೆ ನಡೆದಿದೆ. ಶಾಲೆಯಲ್ಲಿ ಮಕ್ಕಳು ಆಡಳಿತದ ಪರ ಹಾಡನ್ನು ಹಾಡಬೇಕೆಂದು ಭದ್ರತಾ ಪಡೆಗಳು ಬಯಸಿದ್ದರು. ಆದ್ರೆ, ಅದಕ್ಕೆ ನಿರಾಕರಿಸಿದ ಬಾಲಕಿಯನ್ನು ತೀವ್ರವಾಗಿ ಥಳಿಸಿದರ ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಅಕ್ಟೋಬರ್ 13 ರಂದು ಅರ್ದಾಬಿಲ್ನ ಶಾಹೆದ್ ಬಾಲಕಿಯರ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಹಲವಾರು ವಿದ್ಯಾರ್ಥಿಗಳಲ್ಲಿ 15 ವರ್ಷದ ಅಸ್ರಾ ಪನಾಹಿ ಸಾವನ್ನಪ್ಪಿದ್ದಾಳೆ ಎಂದು ಶಿಕ್ಷಕರ ಸಿಂಡಿಕೇಟ್ಗಳ ಸಮನ್ವಯ ಮಂಡಳಿಯ ಹೇಳಿಕೆ ತಿಳಿಸಿದೆ.
ಹದಿಹರೆಯದವರ ಸಾವಿಗೆ ದೇಶದ ಭದ್ರತಾ ಪಡೆಗಳು ಹೊಣೆ ಎಂಬ ಆರೋಪವನ್ನು ಇರಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಪನಾಹಿ ಸಾವಿನ ನಂತರ, ಶಿಕ್ಷಕರ ಸಂಘವು “ಕ್ರೂರ ಮತ್ತು ಅಮಾನವೀಯ” ದಾಳಿಗಳನ್ನು ಖಂಡಿಸಿ ಭಾನುವಾರ ಹೇಳಿಕೆಯನ್ನು ಪೋಸ್ಟ್ ಮಾಡಿದ್ದು, ಇರಾನ್ನ ಶಿಕ್ಷಣ ಸಚಿವ ಯೂಸೆಫ್ ನೂರಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಕಳೆದ ಬುಧವಾರ ನಡೆದ ಘಟನೆಯಲ್ಲಿ ಏಳು ವಿದ್ಯಾರ್ಥಿಗಳು ಗಾಯಗೊಂಡಿದ್ದು, 10 ಮಂದಿಯನ್ನು ಬಂಧಿಸಲಾಗಿದೆ ಎಂದು ಬಿಬಿಸಿ ತಿಳಿಸಿದೆ.
ಮಹಿಳೆಯರು ಹಿಜಾಬ್ನಿಂದ ಮುಖ ಮುಚ್ಚಿಕೊಳ್ಳಬೇಕೆಂಬ ದೇಶದ ಕಟ್ಟುನಿಟ್ಟಿನ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಳೆದ ತಿಂಗಳು 22 ವರ್ಷದ ಮಹ್ಸಾ ಅಮಿನಿ ಬಂಧನದಲ್ಲಿ ಸಾವನ್ನಪ್ಪಿದ ನಂತರ ಇರಾನ್ನಲ್ಲಿ ಪ್ರತಿಭಟನೆ ಕಾವು ಇನ್ನೂ ಕಮ್ಮಿಯಾಗಿಲ್ಲ.
BIGG NEWS: ಹಾಸನಾಂಬೆ ದರ್ಶಕ್ಕೆ ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು