ಬೆಂಗಳೂರು : ಪಂಚಮಸಾಲಿ ಮೀಸಲಾತಿ (Panchamsali Reservation) ಗಾಗಿ ನಾಳೆ ‘ ಬೆಂಗಳೂರು ಚಲೋ ’ಕ್ಕೆ ನಿರ್ಧಾರಿಸಿದ್ಧೇವೆಂದು ಜಯಮೃತ್ಯುಂಜಯ ಸ್ವಾಮೀಜಿ ( Jayamruthyunjaya Swamiji )ಮಾಹಿತಿ ನೀಡಿದ್ದಾರೆ
WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ವಿಚಾರಕ್ಕೆ ಸಂಭಂದಿಸಿದಂತೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಬೆಂಗಳೂರಿಗೆ 25 ಲಕ್ಷ ಜನ ಯಾವಾಗ ಹೋಗಬೇಕು ಎಂಬುವುದರ ಕುರಿತು ಇದೇ 21ರಂದು ಹುಕ್ಕೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ
WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, 2ಎ ಮೀಸಲಾತಿ ಆಗ್ರಹಿಸಿ ಇದೆ 21ರಂದು ಹುಕ್ಕೇರಿ ಪಟ್ಟಣದಲ್ಲಿ ಬೃಹತ್ ಪಂಚಮಸಾಲಿ ಸಮಾವೇಶ ನಡೆಯಲಿದ್ದು, ಈ ಸಮಾವೇಶ ರಾಜ್ಯದ ಗಮನ ಹುಕ್ಕೇರಿಯತ್ತ ನೆಟ್ಟಿದೆ. ಅಂದು ನಾವು ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ. ಎಸ್ ಸಿ, ಎಸ್ ಟಿ ಮೀಸಲಾತಿ ಹೆಚ್ಚಳ ಮಾಡಲಾಗಿದೆ, ಆದರೆ ಸರಕಾರ ನಮ್ಮನ್ನು ನಿರ್ಲಕ್ಷ ಮಾಡಿದ್ದರಾ ಎಂಬ ಭಾವನೆ ಕಾಡುತ್ತಿದೆ.
ವಿಧಾನಸೌಧ ಮುತ್ತಿಗೆ ಹಾಕುವ ಕುರಿತು ಹುಕ್ಕೇರಿ ಸಮಾವೇಶದಲ್ಲಿ ಅಂದು ನಾವು ನಿರ್ಧಾರ ಮಾಡ್ತಿವಿ. ಈಗಾಗಲೇ ಮುಖ್ಯಮಂತ್ರಿಗಳು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ಹುಕ್ಕೇರಿ ಸಮಾವೇಶದ ಮೂಲಕ ಸರ್ಕಾರಕ್ಕೆ ಸಂದೇಶ ನೀಡುತ್ತೇವೆ. ಪಂಚಮಸಾಲಿ ಸಮಾಜದಲ್ಲಿ ನಿರ್ಧಾರಕ ಸಮಾವೇಶ ಹುಕ್ಕೇರಿಯಲ್ಲಿ ನಡೆಯಲಿದೆ.
WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ
ಸಮಾವೇಶದಲ್ಲಿ 50 ರಿಂದ 60 ಸಾವಿರ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ಹುಕ್ಕೇರಿ ಸಮಾವೇಶದಂದು ಹುಕ್ಕೇರಿ ಪಟ್ಟಣದ ಅಡವಿ ಸಿದ್ದೇಶ್ವರ ದೇವಸ್ಥಾನದಿಂದ ರ್ಯಾಲಿ ಹೊರಟು ಸಮಾವೇಶ ಸ್ಥಳ ತಲುಪಲಿದೆ. ಸಮಾವೇಶದ ಕುರಿತು ಹುಕ್ಕೇರಿ, ಯಮಕನಮರಡಿ ಕ್ಷೇತ್ರದ ಹಳ್ಳಿಗಳಲ್ಲಿ ಸಭೆ ಮಾಡಲಾಗಿದೆ. ಜೊತೆಗೆ ಸಮಾವೇಶದಲ್ಲಿ ನಮ್ಮ ಸಮುದಾಯದವರೇ ಇರಬೇಕು. ಸಮಾವೇಶದಲ್ಲಿ ಕೇವಲ ಪಂಚಮಸಾಲಿಯವರು ಇರಬೇಕು ಎಂದ ಸ್ವಾಮೀಜಿ ಹೇಳಿದ್ದಾರೆ.
ಜಯ ಮೃತ್ಯುಂಜಯ ಸ್ವಾಮೀಜಿಯವರ ಸಿಡಿ ಇದೆ ಎಂಬ ವಿಷಯ ಇಟ್ಟುಕೊಂಡು ಸ್ವಾಮೀಜಿಯವರ ತೇಜೊವಧೆ ಮಾಡುವ ಯತ್ನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸ್ವಾಮೀಜಿ, “ಆನೆ ನಡೆದಿದ್ದೆ ದಾರಿ ಅಂತ ನಾವು ಒಳ್ಳೆಯ ಹೆಜ್ಜೆ ಇಟ್ಟಿದ್ದೇವೆ’’ ಎಂದು ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
WATCH VIDEO: ಆಂಬ್ಯುಲೆನ್ಸ್ ಸಿಗದಿದಕ್ಕೆ ಹೆಗಲ ಮೇಲೆ ಸೊಸೆ ಶವ ಹೊತ್ತುಕೊಂಡು ತಿರುಗಾಡಿದ ಮಾವ