ಕೆಎನ್ಎನ್ ಸಿನಿಮಡೆಸ್ಕ್: ಒಂದು ಸಿನಿಮಾ ನೋಡುವುದಕ್ಕೆ ಟ್ರೈಲರ್ ಗುಣಮಟ್ಟ ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಟ್ರೈಲರ್ ನೋಡಿದ ಬಳಿಕವೇ ಸಿನಿಮಾ ಬಗ್ಗೆ ಒಂದಷ್ಟು ಅಂದಾಜು ಲೆಕ್ಕ ಸಿಕ್ಕಿ ಬಿಡುತ್ತವೆ. ಟ್ರೇಲರ್ ವೀಕ್ಷಿಸಿದ ಬಳಿಕ ಸಿನಿಮಾವನ್ನು ನೋಡಲೇಬೇಕೆಂಬ ಭಾವ ಮೂಡಿಸುವುದು ಸುಲಭದ ಕೆಲಸವಲ್ಲ. ಅಷ್ಟು ಅಚ್ಚುಕಟ್ಟಾಗಿ ಟ್ರೇಲರ್ ಕಟ್ ಮಾಡುವ ಜವಬ್ದಾರಿ ನಿರ್ದೇಶಕರದ್ದಾಗಿರುತ್ತದೆ. ಇದೀಗ ಆ ಕೆಲವನ್ನು ಬಹಳ ನಿಷ್ಠೆಯಿಂದ ಮಾಡಿ, ಜನರ ಮನಸ್ಸಿಗೆ ನಾಟುವಂತೆ ತಲುಪಿಸಿದ್ದಾರೆ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ.
ಹೌದು ಸದ್ಯ ಯೆಲ್ಲೋ ಗ್ಯಾಂಗ್ಸ್ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ತುಂಬಾನೇ ಸದ್ದು ಮಾಡುತ್ತಿದೆ. ಈಗಾಗಲೇ ಡ್ರಗ್ಸ್ ದಂಧೆಯ ಕರಾಳ ಮುಖವನ್ನು ಸಾಕಷ್ಟು ಸಾರಿ ಪ್ರಚಾರ ಮಾಡಿದ್ದರು, ಯೆಲ್ಲೋ ಗ್ಯಾಂಗ್ಸ್ ನಲ್ಲಿ ಅದರ ತೀವ್ರತೆ ಎದ್ದು ಕಾಣುತ್ತಿದೆ. ಅದರೊಳಗಿನ ಕಾಳಧನ, ಎಲ್ಲಿಯೋ ಹೋಗಿ, ಇನ್ನೆಲ್ಲಿಯೋ ಮುಟ್ಟೋ ಈ ದಂಧೆಯ ಹಾದಿ. ಹೀಗೆ ಅನೇಕಾನೇಕ ಕಾರಣಗಳು ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ.
ಯೆಲ್ಲೋ ಗ್ಯಾಂಗ್ಸ್ ಸಿನಿಮಾ ಮೊದಲಿನಿಂದ ಹೇಳಿಕೊಳ್ಳುವಂಥಾ ಪ್ರಚಾರವನ್ನೇನು ಮಾಡಿಲ್ಲ. ಆದರೆ ಇದೀಗ ಟ್ರೈಲರ್ ಎಲ್ಲ ಪ್ರಚಾರವನ್ನೂ ಕೊಡಮಾಡಿದೆ. ಅದೇ ಹಭೆಯಲ್ಲೀಗ ರಿಲೀಸ್ ಗೆ ರೆಡಿಯಾಗಿದೆ. ಟ್ರೇಲರ್ ನೋಡಿಯೇ ಜನ ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಹೊರ ಹಾಕುತ್ತಿದ್ದಾರೆ. ಮುಂದಿನ ತಿಂಗಳು ಅಂದರೆ, ನವೆಂಬರ್ 11ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಡ್ರಗ್ಸ್ ಮತ್ತು ಕಾಳಧನದ ಕಥೆಯನ್ನು ಹೊಂದಿರುವ ಯೆಲ್ಲೋ ಗ್ಯಾಂಗ್ ಸಿನಿಮಾವನ್ನು ರವೀಂದ್ರ ಪರಮೇಶ್ವರಪ್ಪ ನಿರ್ದೇಶನ ಮಾಡಿದ್ದಾರೆ. ದೇವ್ ದೇವಯ್ಯ, ಬಲ ರಾಜ್ವಾಡಿ, ಅರ್ಚನಾ ಕೊಟ್ಟಿಗೆ, ಪ್ರದೀಪ್ ಪೂಜಾರಿ, ಅರುಣ್, ಸತ್ಯ, ನಾಟ್ಯರಂಗ, ವಿಠಲ್ ಪರೀಟ, ಸತ್ಯ ಉಮ್ಮತ್ತಾಲ್, ಮಲ್ಲಿಖಾರ್ಜುನ್ ಮುಂತಾದವರು ತಾರಾ ಬಳಗದಲ್ಲಿದ್ದಾರೆ.