ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಸರ್ಕಾರಿ ಶಾಲೆಗಳ ( Government School ) ಮೂಲ ಸವಲತ್ತುಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸೋದಕ್ಕೆ ಎಸ್ ಡಿ ಎಂ ಸಿಗೆ ( SDMC ) ಹಸಿರು ನಿಶಾನೆ ತೋರಿದೆ. ಈ ಮೂಲಕ ನಮ್ಮ ಶಾಲೆ, ನನ್ನ ಕೊಡುಗೆ ಎನ್ನುವಂತ ಹೊಸ ಯೋಜನೆಯನ್ನು ಪರಿಚಯಿಸಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ( School Education Department ) ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ರಾಜ್ಯದಲ್ಲಿ ಶಾಲಾ ಶಿಕ್ಷಣದ ಗುಣಾತ್ಮಕ ಬದಲಾವಣೆ ತರಲು ಹಾಗೂ ಶಾಲಾ ಆಡಳಿತದಲ್ಲಿ ಸಮುದಾಯದ ಸಕ್ರೀಯ ಪಾತ್ರವನ್ನು ಖಚಿತಪಡಿಸಲು, ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ( Primery and High School ) ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ರಚನೆ, ಕಾರ್ಯ ನಿರ್ವಹಣೆಗಳ ಕುರಿತಂತೆ ಸರ್ಕಾರ ಆದೇಶದಲ್ಲಿ ವಿಸ್ತೃತವಾಗಿ ಸೂಚನೆ ನೀಡಲಾಗಿದೆ. ಮಾರ್ಗದರ್ಶವನ್ನು ಕಾಲಕಾಲಕ್ಕೆ ಹೊರಡಿಸಿದೆ ಎಂದಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಅನಿರೀಕ್ಷಿತವಾಗಿ ಉಂಟಾಗುವ ಶಾಲೆಯ ಸಣ್ಣ ಪ್ರಮಾಣದ ದುರಸ್ಥಿ, ಶಾಲಾ ಶುಚಿತ್ವ, ಶಾಲಾ ಶೈಕ್ಷಣಿಕ ಚಟುವಟಿಕೆಗಳು ಇತ್ಯಾದಿ ತುರ್ತು ವೆಚ್ಚಗಳಿಗೆ ಸಹಕಾರಿಯಾಗಲೆಂದು ಸರ್ಕಾರಿ ಶಾಲೆಗಳಲ್ಲಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗಾಗಿ ನಮ್ಮ ಶಾಲೆ ನನ್ನ ಕೊಡುಗೆ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಶಾಲೆ ನನ್ನ ಕೊಡುಗೆ ಯೋಜನೆಯಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಎಸ್ ಡಿ ಎಂ ಸಿಯು ಆರ್ಥಿಕ ಸಹಾಯವನ್ನು ಕೊಡುಗೆ, ದಾನದ ರೂಪದಲ್ಲಿ ಪಡೆಯಲು ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ವಿದ್ಯಾರ್ಥಿಗಳ ಪೋಷಕರಿಂದ ಪಡೆಯಬಹುದಾದ ದಾನ, ಸ್ವಯಿಚ್ಥೆಯಿಂದ ನೀಡುವ ಕೊಡುಗೆ, ದೇಣಿಗೆ ರೂಪದಲ್ಲಿ ಮಾಸಿಕ ಸುಮಾರು 100 ರೂಗಳಂತೆ ಹಣವನ್ನು ಸಂಗ್ರಹಿಸಿ, ಆ ಹಣವನ್ನು ನಿಗಧಿತ ಎಸ್ ಡಿ ಎಂಸಿ ಖಾತೆಗೆ ಪೋಷಕರಿಂದ ಸಂದಾಯ ಮಾಡಲು ಕ್ರಮವಹಿಸುವುದು. ಸಂಗ್ರಹಿಸಿದಂತ ಹಣಕ್ಕೆ ನಿಗದಿತ ರಶೀದಿಯನ್ನು ನೀಡಿ, ಅವುಗಳಿಗೆ ಪ್ರತ್ಯೇಕ ಲೆಕ್ಕಪತ್ರವನ್ನು ಇಡುವ ಜವಾಬ್ದಾರಿಯನ್ನು ಎಸ್ ಡಿಎಂಸಿ ಸದಸ್ಯ ಕಾರ್ಯದರ್ಶಿಯು ನಿರ್ವಹಿಸುವುದೆ ಎಂದು ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ
Teacher Jobs Alert: ಶಿಕ್ಷಕರು ಬೇಕಾಗಿದ್ದಾರೆ, ಈ ಕೂಡಲೇ ಸಂಪರ್ಕಿಸಿ
ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವವರಿಗೆ ವಿಶೇಷ ರೈಲು ಸೇವೆ