ಬೆಂಗಳೂರು : ಈ ಬಾರಿ ದೀಪಾವಳಿ ಹಬ್ಬಕ್ಕೆ ಸಾಲು ಸಾಲು ರಜೆ ಇರುವ ಕಾರಣ ಜನರು ತಮ್ಮ ಊರುಗಳಿಗೆ ತೆರಳಲು ಸಿದ್ದತೆ ನಡೆಸಿದ್ದಾರೆ.
ಅಕ್ಟೋಬರ್ 24 ರ ಸೋಮವಾರದಂದು ನರಕ ಚತುದರ್ಶಿ ಹಾಗೂ ಅ.25 ರಂದು ಮಂಗಳವಾರ ಮಾವಾಸ್ಯೆ ಹಾಗೂ 26 ರಂದು ಬುಧವಾರ ಬಲಿಪಾಡ್ಯಮಿ ಹಿನ್ನೆಲೆ ಸರಣಿ ರಜೆಗಳಿದ್ದು, ಜನರು ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದಾರೆ.
ಇದೀಗ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಡುವವರಿಗೆ ರೈಲ್ವೆ ಇಲಾಖೆ ಅ.22 ರಂದು ಶನಿವಾರದಂದು ಯಶವಂತಪುರದಿಂದ ಶಿವಮೊಗ್ಗಕ್ಕೆ ವಿಶೇಷ ರೈಲು ಸೇವೆ ಒದಗಿಸುತ್ತಿದೆ. ಅಂದು ಬೆಳಗ್ಗೆ 10:30 ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡುವ ರೈಲು 11:15 ಕ್ಕೆ ತುಮಕೂರು, 12:33 ಕ್ಕೆ ಅರಸೀಕೆರೆ, 1:23 ಕ್ಕೆ ಬೀರೂರು, 2:18 ಕ್ಕೆ ಭದ್ರಾವತಿ ಹಾಗೂ ಮಧ್ಯಾಹ್ನ 3:30 ಕ್ಕೆ ಶಿವಮೊಗ್ಗ ತಲುಪಲಿದೆ.
BIGG NEWS: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆದರಿಕೆ ಪ್ರಕರಣ; ಸಿಐಡಿ ತನಿಖೆ ಆರಂಭ