ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದಲ್ಲಿ 16 ವರ್ಷದ ಬಾಲಕಿಯೊಬ್ಬಳು ಮೊಬೈಲ್ ಖರೀದಿಸಲು ತನ್ನ ರಕ್ತವನ್ನು ಮಾರಾಟ ಮಾಡಲು ಯತ್ನಿಸಿದ ಘಟನೆ ವರದಿಯಾಗಿದೆ.
ಬಾಲಕಿ ಭಾನುವಾರ ಆನ್ಲೈನ್ ಶಾಪಿಂಗ್ ಮೂಲಕ ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದಳು. . ಇದರ ಬೆಲೆ ಸುಮಾರು 9,000 ರೂ.ಗಳಾಗಿದ್ದು, ಗುರುವಾರ ಫೋನ್ ಬರುವುದರಲ್ಲಿತ್ತು. ಆದರೆ ಮೊಬೈಲ್ ಗೆ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ಬದಲಾಗಿ ತನ್ನ ರಕ್ತವನ್ನು ಮಾರಾಟ ಮಾಡಲು ಬಲೂರ್ ಘಾಟ್ ನ ಜಿಲ್ಲಾ ಆಸ್ಪತ್ರೆಗೆ ಹೋಗಲು ನಿರ್ಧರಿಸಿದ್ದಳು. ಅವಳು ಟ್ಯೂಷನ್ ಗೆ ಹೋಗುವುದಾಗಿ ಹೇಳಿ ಮನೆಯಿಂದ ಬಸ್ ಹತ್ತಿ ಹೋಗಿದ್ದಾಳೆ.
ಮೊದಲು ಅವಳು ತನ್ನ ಸಹೋದರನ ಚಿಕಿತ್ಸೆಗೆ ಹಣ ಪಾವತಿಸಲು ತನ್ನ ರಕ್ತವನ್ನು ಮಾರಾಟ ಮಾಡಲು ಬಯಸುತ್ತೇನೆ ಎಂದು ನಮಗೆ ಹೇಳಿದಳು. ಆದರೆ ನಂತರ, ಸ್ವಲ್ಪ ಸಮಯ ಕೌನ್ಸೆಲಿಂಗ್ ಮಾಡಿದ ನಂತರ ನಾನು ಸ್ಮಾರ್ಟ್ ಫೋನ್ ಆರ್ಡರ್ ಮಾಡಿದ್ದೇನೆ, ಹಾಗಾಗಿ ನನಗೆ ಹಣದ ಅವಶ್ಯಕತೆ ಇದೆ ಹಾಗಾಗಿ ರಕ್ತ ಕೊಡಲು ಬಂದಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ ಎಂದು ಬಲೂರ್ಘಾಟ್ ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನ ಕನಕ್ ಕುಮಾರ್ ದಾಸ್ ಹೇಳಿದ್ದಾರೆ. ಬಳಿಕ ಬಾಲಕಿಗೆ ತಿಳಿ ಹೇಳಿ ಕಳುಹಿಸಲಾಯಿತು ಎನ್ನಲಾಗಿದೆ.