ಬೆಂಗಳೂರು : ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ವಿವಾದದ ಕಿಡಿ ಹೊತ್ತಿಸಿದ್ದಾರೆ.
WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್
ನಟ ಚೇತನ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಇದೀಗ ಈ ಕುರಿತು ಕಾಂತಾರ ಚಿತ್ರ ನಿರ್ದೇಶಕರಾದ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ‘ಈ ವಿಚಾರದಲ್ಲಿ ನಾನು ಯಾರಿಗೂ ಉತ್ತರ ಕೊಡಬೇಕಾಗಿಲ್ಲ’ ಎಂಬ ಮಾತನ್ನು ರಿಷಬ್ ಹೇಳಿದ್ದಾರೆ. ಮೂಲ ನಿವಾಸಿಗಳು ನಾನು ಈ ಸಿನಿಮಾ ಮಾಡಬೇಕಾದರೆ ನನ್ನ ಜೊತೆಯಲ್ಲಿದ್ದವರು. ಚಿಕ್ಕಂದಿನಿಂದಲೇ ನಾವು ದೈವ ನಂಬಿದ್ದೇವೆ. ಇಂಥದ್ದೊಂದು ಕತೆ ಹೇಳೋಕೆ ಹೋಗ್ತಿದ್ದೀನಿ ಎಂಬಾ ಅಲ್ಲಿಯ ಮೂಲ ಜನರಿಗೆ ನೋವಾಗಬಾರದು ಎಂದು ನಾನು ಬಯಸಿದ್ದೆ. ಎಲ್ಲೂ ದೈವ ದೇವಾದಿಗಳಿಗೆ ಇದನ್ನು ಆರಾಧಿಸುವ ಜನರಿಗೆ ನೋವಾಗಬಾರದು. ಎಲ್ಲೂ ಕೂಡ ತಪ್ಪಾಗಬಾರದು ಎಂಬುದನ್ನು ನನ್ನ ಉದ್ದೇಶವಾಗಿತ್ತು ಎಂದು ರಿಷಬ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್
ಕಾಂತಾರ ಚಿತ್ರ ಕುರಿತು ವಿವಾದವೇನು ?
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.
ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದಾರೆ.
WATCH VIDEO: ನಗ್ನವಾಗಿ ವಿದ್ಯುತ್ ತಂತಿ ಮೇಲೆ ಯುವಕನ ಸ್ಟಂಟ್… ವಿಡಿಯೋ ವೈರಲ್
ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ನಟ ಚೇತನ್ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ. ಎಲ್ಲೆಡೆ ಕಿಡಿಕಾರಿದ್ದಾರೆ., ಈ ಬಗ್ಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಮಾಧ್ಯಮಗಳೊಂದಿಗೆ ನಟ ಚೇತನ್ ಸ್ಪಷ್ಟನೆ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.