ಬೆಂಗಳೂರು : ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಶೇಷಾದ್ರಿಪುರಂನಲ್ಲಿ ಅವಾಂತರ ಸೃಷ್ಠಿಯಾಗಿದೆ. ಬೆಂಗಳೂರಿನ ಮಂತ್ರಿಮಾಲ್ ಸಮೀಪದ ಜೆಡಿಎಸ್ ಕೇಂದ್ರ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದ್ದು, ಕಾರು, ಬೈಕ್ಗಳು ಜಖಂಗೊಂಡಿವೆ.
ತಡೆಗೋಡೆಯ ಪಕ್ಕದಲ್ಲಿ ಕಾರು ಹಾಗೂ ಬೈಕ್ಗಳನ್ನು ನಿಲ್ಲಿಸಲಾಗಿತ್ತು. ಆದ್ರೆ, ಮೆಟ್ರೋ ತಡೆಗೋಡೆ ಕುಸಿತದಿಂದ 6 ಕಾರುಗಳು ಹಾಗೂ ಎರಡು ಬೈಕ್ಗೆ ಹಾನಿಯಾಗಿದೆ. ಇದರಿಂದ ವಾಹನದ ಮಾಲೀಕರು ಕಂಗಾಲಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಇದೀಗ ಘಟನಾ ಸ್ಥಳಕ್ಕೆ 11 ಗಂಟೆಗಳ ನಂತರ ಬಿಎಂಆರ್ಸಿಎಲ್ (BMRCL )ಎಂಡಿ ಅಂಜುಮ್ ಪರ್ಮೇಜ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರಿಂದ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಾರು ಬೈಕ್ಗೆ ಹಾನಿಯಾಗಿದ್ರೂ ಇಷ್ಟು ಲೇಟ್ ಆಗಿ ಬಂದಿದ್ದೀರಿ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಮಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ
ಇನ್ನೂ ಮುಂದಿನ 5 ದಿನ ಮಳೆ ಸಾಧ್ಯತೆ :
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ ಮುಂದಿನ ಐದು ದಿನ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಲ್ಲೂ ಇನ್ನೂ 5 ದಿನ ಮಳೆಯ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ರಾಜಾಕಾಲುವೆ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಜಾಗ್ರತೆಯಿಂದ ಇರಬೇಕಿದೆ.