ರಾಯಚೂರು: ಮಂತ್ರಾಲಯ ರಾಯರ ಮಠದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಕೋಟ್ಯಾಂತರ ರೂ. ಕಾಣಿಕೆ ಸಂಗ್ರಹ ವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ
VIDEO : ಇಂಡೋನೇಷ್ಯಾದ ಮಸೀದಿಯಲ್ಲಿ ಭೀಕರ ‘ಅಗ್ನಿ’ ಅವಘಡ : ಧರೆಗುರುಳಿದ ‘ದೈತ್ಯ’ ಗುಮ್ಮಟ
ಗುರುರಾಯರ ಸನ್ನಿಧಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿಕಳೆದ ಒಂದು ತಿಂಗಳಿಂದ ಭಕ್ತರಿಂದ ಭಾರೀ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಅಕ್ಟೋಬರ್ ತಿಂಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ಪೂರ್ಣವಾಗಿದ್ದು, ಒಟ್ಟು 1,98,17,614 ರೂ. ಸಂಗ್ರಹವಾಗಿದೆ. ಸಂಗ್ರಹವಾದ ಕಾಣಿಕೆಯಲ್ಲಿ 4,40,660 ರೂ. ನಾಣ್ಯಗಳು ಹಾಗೂ 1,93,77,054 ರೂ. ನೋಟುಗಳಿವೆ.
VIDEO : ಇಂಡೋನೇಷ್ಯಾದ ಮಸೀದಿಯಲ್ಲಿ ಭೀಕರ ‘ಅಗ್ನಿ’ ಅವಘಡ : ಧರೆಗುರುಳಿದ ‘ದೈತ್ಯ’ ಗುಮ್ಮಟ
ಜೊತೆಗೆ 128 ಗ್ರಾಂ ಬಂಗಾರ, 810 ಗ್ರಾಂ ಬೆಳ್ಳಿಯಿದೆ ಇದು ಸೆ. 29 ರಿಂದ ಅ. 18ರವರೆಗಿನ 20 ದಿನಗಳ ಕಾಣಿಕೆ ಸಂಗ್ರವಾಗಿದೆ ಎಂದು ಗುರು ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಶ್ರೀನಿವಾಸ ರಾವ್ ಮಾಹಿತಿ ನೀಡಿದ್ದಾರೆ.
VIDEO : ಇಂಡೋನೇಷ್ಯಾದ ಮಸೀದಿಯಲ್ಲಿ ಭೀಕರ ‘ಅಗ್ನಿ’ ಅವಘಡ : ಧರೆಗುರುಳಿದ ‘ದೈತ್ಯ’ ಗುಮ್ಮಟ
ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ನೂರಾರು ಜನ ಸಿಬ್ಬಂದಿ, ಭಕ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಎಣಿಕೆ ಕಾರ್ಯ ಮುಕ್ತಾಯವಾಗಿದೆ.