ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಇಂಡೋನೇಷ್ಯಾದ ಉತ್ತರ ಜಕಾರ್ತದಲ್ಲಿರುವ ಜಾಮಿ ಮಸೀದಿಯ ದೈತ್ಯ ಗುಮ್ಮಟವು ಬುಧವಾರ ಬೆಂಕಿಗೆ ಆಹುತಿಯಾಗಿದೆ.
ಬುಧವಾರ ಮಸೀದಿ ನವೀಕರಣ ಕಾರ್ಯದ ವೇಳೆ ಬೆಂಕಿಗೆ ಆಹುತಿಯಾಗಿ ಕುಸಿದುಬಿದ್ದಿದೆ. ಆ ಸ್ಥಳದಿಂದ ದಟ್ಟವಾದ ಹೊಗೆಯ ಮೋಡವೊಂದು ಧುಮ್ಮಿಕ್ಕುತ್ತಿರುವುದು ಕಂಡು ಬಂದಿದೆ. ಈ ಮಸೀದಿಯು ಇಸ್ಲಾಮಿಕ್ ಅಧ್ಯಯನ ಮತ್ತು ಅಭಿವೃದ್ಧಿಯ ಚಿಂತಕರ ಚಾವಡಿಯಾದ ಜಕಾರ್ತಾ ಇಸ್ಲಾಮಿಕ್ ಸೆಂಟರ್ ಗೆ ಸೇರಿದ ಕಟ್ಟಡ ಸಂಕೀರ್ಣದಲ್ಲಿದೆ. ಮಸೀದಿಯಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳು ನಡೆಯುತ್ತಿದ್ದ ಕಾರಣ ಹೆಚ್ಚಿನ ಜನಸಂದಣಿ ಇರಲಿಲ್ಲ, ದೈತ್ಯ ಗುಮ್ಮಟವು ಬೆಂಕಿಯಲ್ಲಿ ಮುಳುಗಿದ ವಿಡಿಯೋ ಮೈ ಜುಮ್ಮೆನಿಸುವಂತಿದೆ. ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
WATCH 🚨 Huge dome of the Jakarta Islamic Centre Grand Mosque in Indonesia collapses following a major fire pic.twitter.com/916ecPbgAa
— Insider Paper (@TheInsiderPaper) October 19, 2022
ದೀಪಾವಳಿಯಲ್ಲಿ ನಿಷೇಧಿತ ‘ಪಟಾಕಿ’ ಸಿಡಿಸಿದ್ರೆ 6 ತಿಂಗಳು ಜೈಲೂಟ ಗ್ಯಾರೆಂಟಿ |Crackers Ban