ಬೆಂಗಳೂರು: ಶಿಕ್ಷಕರ ವರ್ಗಾವಣೆ ( Teacher Transfer ) ಸಂಬಂಧ ಸಾರ್ವನಿಕ ಶಿಕ್ಷಣ ಇಲಾಖೆಯಿಂದ ( School Education Department ) ಪೂರ್ವ ಸಿದ್ಧತೆ ಕೈಗೊಳ್ಳುವ ಸಂಬಂಧ ಪರಿಷೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಸುತ್ತೋಲೆ ಹೊರಡಿಸಿದ್ದು, 2022-23ನೇ ಸಾಲಿನ ಶಿಕ್ಷಕರ ವರ್ಗಾವಣೆಗಾಗಿ ಪೂರ್ವ ಸಿದ್ಧತಾ ಚಟುವಟಿಕೆಗಳನ್ನು ಆರಂಭಿಸೋದಕ್ಕಾಗಿ ಪರೀಷ್ಕೃತ ವೇಳಾಪಟ್ಟಿಯನ್ನು ( Teacher Transfer Timetable ) ಪ್ರಕಟಿಸಿದ್ದಾರೆ.
ಇಂದು ಪ್ರಕಟಿಸಿರುವಂತ ಪರಿಷ್ಕೃತ ವೇಳಾಪಟ್ಟಿಯಂತೆ ದಿನಾಂಕ 30-09-2022ರಲ್ಲಿ ಇದ್ದಂತೆ ವೃಂದವಾರು ಎಲ್ಲಾ ಶಿಕ್ಷಕರ ವೈಯಟೆಡ್ ಅಂಕಗಳ ಕರಡು ಪಟ್ಟಿಯನ್ನು ಆನ್ ಲೈನ್ ನಲ್ಲಿ ದಿನಾಂಕ 12-10-2022ರಂದು ಪ್ರಕಟಿಸಿದೆ. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸೋದಕ್ಕೆ ದಿನಾಂಕ 29-10-2022ರವರೆಗೆ ಅವಕಾಶ ನೀಡಲಾಗಿದೆ.
ದಿನಾಂಕ 02-11-2022ರಂದು ನಿರ್ಧಿಷ್ಟಪಡಿಸಿದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3 ವರ್ಷದಿಂದ 5 ವರ್ಷಗಳ ಸೇವೆ ಸಲ್ಲಿಸಿದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ದಿನಾಂಕ 31-10-2022ರಂದು ಪ್ರಾಥಮಿಕ ಶಾಲಾ ಸಹಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರಿಗೆ ಬಡ್ತಿಗೆ ಅರ್ಹರಿರುವವರ ಕರಡು ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಇನ್ನುಳಿದಂತೆ ಎಲ್ಲಾ ಮಾಹಿತಿಯ ವೇಳಾಪಟ್ಟಿ ಮುಂದಿದೆ.
ಹೀಗಿದೆ 2022-23ನೇ ಸಾಲಿನ ಶಿಕ್ಷಕರ ವರ್ಗಾವಣೆ ಪೂರ್ವಸಿದ್ಧತಾ ಚಟುವಟಿಕೆಗಳ ಪರಿಷ್ಕೃತ ವೇಳಾಪಟ್ಟಿ
BIGG NEWS : ಉದ್ಯೋಗಾಂಕ್ಷಿಗಳಿಗೆ ಸಿಹಿಸುದ್ದಿ : ಹೊಸದಾಗಿ ಮಂಜೂರಾದ ಈ 176 ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ ಆರಂಭ