ಬೆಂಗಳೂರು : ಕಾಂತಾರ ಸಿನಿಮಾ ಬಗ್ಗೆ ವಿವಾದಾತ್ಮಕ ಪೋಸ್ಟ್ ವಿಚಾರದ ಬಗ್ಗೆ ಬೆಂಗಳೂರಲ್ಲಿ ನಟ ಚೇತನ್ ಮಾತನಾಡಿ ಭೂತಕೋಲ ಹಿಂದೂ ಧರ್ಮದಲ್ಲಿ ಬರೋದಿಲ್ಲʼ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೀಗ ನಟ ಚೇತನ್ ಹೇಳಿಕೆಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಟಾಂಗ್ ನೀಡಿದ್ದು, ಯಾರು ಏನು ಚರ್ಚೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದಿದ್ದಾರೆ.
‘ನಾವೆಲ್ಲಾ ಹಿಂದೂಗಳು, ದೈವಗಳು ನಮ್ಮ ಕಷ್ಟವನ್ನು ಬಗೆಹರಿಸುತ್ತದೆ ಎಂದು ನಂವಬಿಕೊಂಡು ಬಂದಿದ್ದೇವೆ. ಭೂತರಾಧನೆ ಮಾಡುತ್ತಿರೋ ನಾವು ಹಿಂದೂಗಳಾಗಿ ಇರೋರು, ಹಿಂದೂಗಳಾಗಿ ಬದುಕುತ್ತಿರುವುದು, ನಾವು ಹಿಂದುಗಳಲ್ಲಅಂದರೆ ಅವರ ಹೇಳಿಕೆ ಶಾಸನ ಆಗುತ್ತಾ.. ಯಾರು ಏನು ಚರ್ಚೆ ಮಾಡುತ್ತಾರೆ ಎನ್ನುವುದು ಮುಖ್ಯವಲ್ಲ, ಭೂತಾರಾಧನೆ ಹಿಂದೂ ಸಂಸ್ಕೃತಿಯ ಒಂದು ಭಾಗ ಎಂದಿದ್ದಾರೆ ಪರಿಶಿಷ್ಟರು , ಕೊರಗರು ಭೂತಾರಾಧನೆ ಮಾಡಿಕೊಂಡು ಬರುತ್ತಿದ್ದಾರೆ, ನಾವು ಪಂಜುರ್ಲಿ ನಂಬುತ್ತೇವೆ, ನಂದಿ ಹಾಗೂ ನಾಗದೇವರನ್ನು ಬೇರೆ ಬೇರೆ ದೈವಗಳನ್ನು ನಂಬುತ್ತಾರೆ ಎಂದಿದ್ದಾರೆ.
ಕಾಂತಾರ ಚಿತ್ರ ಕುರಿತು ವಿವಾದವೇನು ?
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.
ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ. ʻ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದಾರೆ.
ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ನಟ ಚೇತನ್ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ. ಎಲ್ಲೆಡೆ ಕಿಡಿಕಾರಿದ್ದಾರೆ., ಈ ಬಗ್ಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಕುರಿತು ಮಾಧ್ಯಮಗಳೊಂದಿಗೆ ನಟ ಚೇತನ್ ಸ್ಪಷ್ಟನೆ ನೀಡುತ್ತಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರ ಇದೀಗ ಭಾರತದಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಕಾಂತಾರ ಸಿನಿಮಾದ ಸಕ್ಸಸ್ ಬೆನ್ನಲ್ಲೇ ಹೊಸ ವಿವಾದದ ಸೃಷ್ಠಿಯಾಗಿದೆ.
ಕರಾವಳಿ ಭೂತಾರಾಧನೆ ಬಗ್ಗೆ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡುವ ಮೂಲಕ ವಿವಾದ ಹುಟ್ಟಿಸಿದ್ದಾರೆ. ʻ ಕರಾವಳಿ ಭಾಗದ ಭೂತಾರಾಧನೆ ಹಿಂದೂ ಸಂಸ್ಕೃತಿ ಅಲ್ವಾʼ? ಎಂದು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿರೋ ಕಾಂತಾರಾ ಗೆ ನಟ ಚೇತನ್ ಕಿಡಿ ಕಾರಿದ್ದಾರೆ
ಭೂತಕೋಲ ಹಿಂದೂ ಸಂಸ್ಕೃತಿ ಎಂದು ರಿಷಬ್ ಶೆಟ್ಟಿ ಹೇಳಿಕೆಯನ್ನು ನಟ ಚೇತನ್ ಅಲ್ಲಗೆಳೆದಿದ್ದಾರೆ. ಈ ಬಗ್ಗೆ ನೆಟ್ಟಿಗರು ನಟ ಚೇತನ್ ಪ್ರಚಾರಕ್ಕಾಗಿ ಈ ವಿವಾದವನ್ನು ಎತ್ತಿದ್ದಾರೆ ಎಲ್ಲೆಡೆ ಕಿಡಿಕಾರಿದ್ದಾರೆ., ಈ ಬಗ್ಗೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ.
ಕೋವಿಡ್ ಸಂಕಷ್ಟದ ನಡುವೆಯೂ ರಾಜ್ಯದ ಸಮಗ್ರ ಅಭಿವೃದ್ಧಿ – ಸಿಎಂ ಬಸವರಾಜ ಬೊಮ್ಮಾಯಿ