ಯಾದಗಿರಿ: ಜನತೆಗೆ ಸಿಎಂ ಬಸವರಾಜ ಬೊಮ್ಮಾಯಿ ದೀಪಾವಳಿ ಶುಭಾಶಯಗಳನ್ನ ತಿಳಿಸಿದ್ದಾರೆ. ಜನಸಂಕಲ್ಪ ಯಾತ್ರೆ ಯಾದಗಿರಿ ಜಿಲ್ಲೆಯಲ್ಲಿ ಶಾಸಕ ರಾಜೂಗೌಡ ಅವರ ಕ್ಷೇತ್ರದಿಂದ ಪ್ರಾರಂಭ ಮಾಡುತ್ತಿದ್ದರು.
BIGG NEWS: ಹಾಲಿನ ದರ ಹೆಚ್ಚಿಸುವಂತೆ 14 ಹಾಲು ಉತ್ಪಾದಕರ ಸಂಘಗಳು ಮನವಿ; ಎಸ್.ಟಿ.ಸೋಮಶೇಖರ್
ಯಾತ್ರೆಗೆ ಸಂಪೂರ್ಣ ಜನ ಬೆಂಬಲ ಸಿಗುತ್ತಿದೆ. ಈ ಹಿಂದೆ ರಾಯಚೂರು, ಕೊಪ್ಪಳ, ವಿಜಯನಗರ, ಬಳ್ಳಾರಿ, ಬೀದರ್ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ. ಜನತೆಯಿಂದ ಪ್ರೋತ್ಸಾಹ ದೊರೆಯುತ್ತಿದೆ.ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯವನ್ನು ಸುತ್ತುತ್ತಿದ್ದ ಸಂದರ್ಭದಲ್ಲಿ ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪವಾಗಿ ಪರಿವರ್ತನೆಯಾಗುತ್ತದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
BIGG NEWS: ಹಾಲಿನ ದರ ಹೆಚ್ಚಿಸುವಂತೆ 14 ಹಾಲು ಉತ್ಪಾದಕರ ಸಂಘಗಳು ಮನವಿ; ಎಸ್.ಟಿ.ಸೋಮಶೇಖರ್
ಹೆಲಿಪ್ಯಾಡ್ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗುಂಡಿ ಪ್ರಕರಣವನ್ನ ತನಿಖೆಗೆ ಒಪ್ಪಿಸಲಾಗಿದೆ. ಗುಂಡಿ ಮುಚ್ಚಿಸಲು ಹೇಳಿದ್ದೇನೆ. ಕುಮಾರಸ್ವಾಮಿ ಹಿಂದೆ ಆಡಳಿತ ಕಾಲದಲ್ಲಿ ಆಗಲೂ ಗುಂಡಿ ಬಿದ್ದಿದ್ದವು. ಅವರು ಆರೋಪ ಮಾಡುವುದರಲ್ಲಿ ಹುರಳಿಲ್ಲ ಎಂದರು.
ಸಿಎಂಗೆ ಧಮ್ ಇದ್ದರೆ ಸಿದ್ದರಾಮಯ್ಯ ಮೇಲಿನ ಆರೋಪಗಳನ್ನ ತನಿಖೆ ಮಾಡಿಸಲಿ ಅನ್ನೋ ಹೆಚ್ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪಿಎಸ್ಐ ಹಗರಣದಲ್ಲಿ ಸಿಐಡಿಯವರು ಆರೋಪಿಗಳನ್ನು ತನಿಖೆಗೆ ಬಂಧಿಸಿದ್ದಾರೆ. ತನಿಖೆ ಕೈಗೊಂಡು ಕ್ರಮ ಕೈಗೊಳ್ಳಲಾಗುತ್ತಿದೆ. ರಾಹುಲ್ ಗಾಂಧಿ ಅವರು ಕಣ್ಣು ತೆರೆದು ನೋಡಲಿ ಅಂತ ಅವರಿಗೆ ಫೈಲ್ ಕೊಡುತ್ತೇವೆ. ಸಿದ್ದರಾಮಯ್ಯ ಸರ್ಕಾರದ ಹಗರಣಗಳು ಅವರಿಗೂ ಗೊತ್ತಾಗಲಿ ಎಂದು ಹೇಳಿದರು.