ಲಂಡನ್ : ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಯಾರ್ಕರ್ಗಳನ್ನು ಇನ್ ಸ್ವಿಂಗ್ ಮಾಡುವ ಮೂಲಕ ಬ್ಯಾಟ್ಸ್ಮನ್ಗಳನ್ನು ಅಚ್ಚರಿಗೊಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಈ ನಡುವೆ ಬ್ರಿಸ್ಬೇನ್ನ ಗಬ್ಬಾದಲ್ಲಿ ಬುಧವಾರ ನಡೆದ ಟಿ 20 ವಿಶ್ವಕಪ್ ಅಭ್ಯಾಸ ಪಂದ್ಯದ ಮೊದಲ ಓವರ್ನಲ್ಲಿ ಅಫ್ಘಾನಿಸ್ತಾನದ ಆರಂಭಿಕ ಆಟಗಾರ ರಹಮಾನುಲ್ಲಾ ಗುರ್ಬಾಜ್ ಅವರನ್ನು ಎಡಗೈ ಬ್ಯಾಟ್ಸ್ಮನ್ ಔಟ್ ಮಾಡಿರುವುದು ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಅಭ್ಯಾಸ ಪಂದ್ಯದ ಮೊದಲ ಓವರ್ನ ಐದನೇ ಎಸೆತದಲ್ಲಿ ಶಾಹೀನ್ ಅಫ್ರಿದಿ ಎಸೆದ ಯಾರ್ಕರ್ ಅನ್ನು ಗುರುತಿಸುವಲ್ಲಿ ಎಡವಿದ ಆಫ್ಘನ್ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಸ್ವಲ್ಪ ಸಮಯದ ನಂತರ, ಅಫ್ಘಾನಿಸ್ತಾನದ ಆರಂಭಿಕ ಆಟಗಾರನನ್ನು ಬದಲಿ ಫೀಲ್ಡರ್ ಒಬ್ಬರು ಮೈದಾನದಿಂದ ಹೊರಕ್ಕೆ ಕರೆದೊಯ್ದರು
— Guess Karo (@KuchNahiUkhada) October 19, 2022