ನವದೆಹಲಿ: ಭಾರತದ ಜೀವ ವಿಮಾ ನಿಗಮ (ಎಲ್ಐಸಿ) ಇತ್ತೀಚೆಗೆ ಧನ್ ವರ್ಷ ಯೋಜನೆ(Dhan Varsha Plan)(ಯೋಜನೆ ಸಂಖ್ಯೆ 866) ಯನ್ನು ಪ್ರಾರಂಭಿಸಿದೆ. ಎಲ್ಐಸಿ ಧನ್ ವರ್ಷ ಯೋಜನೆಯು ಲಿಂಕ್ ಮಾಡದ, ಭಾಗವಹಿಸದ, ವೈಯಕ್ತಿಕ, ಉಳಿತಾಯ, ಜೀವ ವಿಮಾ ಯೋಜನೆಯಾಗಿದ್ದು ಅದು ರಕ್ಷಣೆ ಮತ್ತು ಉಳಿತಾಯದ ಸಂಯೋಜನೆಯನ್ನು ನೀಡುತ್ತದೆ.
ಪಾಲಿಸಿ ಮಾಡಿಸಿರುವವರು ಅಕಾಲಿಕ ಮರಣ ಹೊಂದಿದ್ದಲ್ಲಿ ಈ ಯೋಜನೆಯು ಕುಟುಂಬಕ್ಕೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೇ, ವಿಮೆ ಮುಗಿದ ನಂತ್ರ ವಿಮಾದಾರರಿಗೆ ಖತರಿ ಮೊತ್ತವೂ ಸಿಗಲಿದೆ.
LIC ವೆಬ್ಸೈಟ್ನ ಪ್ರಕಾರ, ಒಟ್ಟು ವೈದ್ಯಕೀಯೇತರ ಮಿತಿ, ವಯಸ್ಸು ಮತ್ತು ಆಯ್ಕೆಮಾಡಿದ ವಿಮಾ ಮೊತ್ತವನ್ನು ಅವಲಂಬಿಸಿ ಈ ಯೋಜನೆಯು ವೈದ್ಯಕೀಯೇತರ ಮತ್ತು ವೈದ್ಯಕೀಯ ಯೋಜನೆಗಳಿಗೆ ಲಭ್ಯವಿರುತ್ತದೆ.
ಈ ಯೋಜನೆಯನ್ನು ಖರೀದಿಸಲು 2023ರ ಮಾರ್ಚ್ 31ರವರೆಗೆ ಅವಕಾಶವಿದೆ. ಈ ಯೋಜನೆಯಲ್ಲಿ 10 ಅಥವಾ 15 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಯೋಜನೆಯಡಿಯಲ್ಲಿ ಕೆಲವು ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಸಾಲ ಸೌಲಭ್ಯವನ್ನೂ ಪಡೆಯಬಹುದು.
BIGG NEWS: ಸಿಎಂಗೆ ಧಮ್ ಇದ್ರೆ ಸಿದ್ದರಾಮಯ್ಯನ ಮೇಲಿನ ಆರೋಪಗಳನ್ನು ತನಿಖೆ ಮಾಡಿಸಲಿ; ಹೆಚ್ ಡಿಕೆ ಸವಾಲ್
ಇಂಜಿನಿಯರಿಂಗ್ ಸೇರಬಯಸುವ ವಿದ್ಯಾರ್ಥಿಗಳೇ ಗಮನಿಸಿ : ಪ್ರವೇಶಾತಿಗೆ ನ.30 ರವರೆಗೆ ಅವಕಾಶ