ನವದೆಹಲಿ: ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಿರುವ ಕರೋನ ವೈರಸ್ ದೇಶದಲ್ಲಿ ಹೆಚ್ಚಾಗುತ್ತಿವ ಹಿನ್ನೆಲೆ ದೇಶಾದ್ಯಂತ ಎಲ್ಲರೂ ಮತ್ತೆ ಮಾಸ್ಕ್ (Face Mask) ಧರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಮಂಗಳವಾರ ಕೇಂದ್ರ ಆರೋಗ್ಯ ಸಚಿವ ಡಾ. ಮಾನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದ್ದು, ಹೊಸ ಒಮಿಕ್ರಾನ್ ರೂಪಾಂತರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜನರು ಸಾರ್ವಜನಿಕವಾಗಿ ಹೊರಗೆ ಬಂದಾಗ ಮತ್ತೆ ಮಾಸ್ಕ್ ಧರಿಸುವ ನಿಯಮ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ವೇಗವಾಗಿ ಹರಡುವ ಓಮಿಕ್ರಾನ್ನ ಎರಡು ಹೊಸ ಉಪ ರೂಪಾಂತರಿಗಳು ಎಲ್ಲರಲ್ಲೂ ಆತಂಕ ಮೂಡಿಸಿವೆ. ಇವುಗಳ ತಡೆಗೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸುವುದು ಮತ್ತು ಕೊವಿಡ್ ನಿಯಮಗಳನ್ನು ದೇಶಾದ್ಯಂತ ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ರಾಜೀವ್ ಬಹ್ಲ್, ಎನ್ಐಟಿಐ ಆಯೋಗ್ ಸದಸ್ಯ (ಆರೋಗ್ಯ) ವಿಕೆ ಪಾಲ್, ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ ಅಧ್ಯಕ್ಷ ಎನ್ಕೆ ಪಾಲ್ ಸೇರಿದಮತೆ ಕೆಲವು ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
BIGG NEWS : `KPTCL’ ನೇಮಕಾತಿ ಅಕ್ರಮ : ಮತ್ತೆ ಇಬ್ಬರು ಆರೋಪಿಗಳು ಅರೆಸ್ಟ್