ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ಹಾಗೂ ತಾಯಿಯ ಹೇಳಿಕೆ ದಾಖಲಾಗಿದೆ.
ಹೌದು, ಪ್ರಕರಣ ಸಂಬಂಧ ನಾಲ್ವರು ಸಂತ್ರಸ್ತೆಯರ 161 ಹೇಳಿಕೆಯನ್ನು ಚಿತ್ರದುರ್ಗ ಪೊಲೀಸರು ದಾಖಲಿಸಿದ್ದಾರೆ. ಆದ್ರೆ ದೂರುದಾರ ಮಹಿಳೆ ಹಾಗೂ ಸಂತ್ರಸ್ತೆಯರ ಹೇಳಿಕೆಗಳು ಬಾರಿ ಗೊಂದಲಮಯವಾಗಿದೆ ಎನ್ನಲಾಗಿದೆ.
ಮೈಸೂರಿಗೆ ತೆರಳಿದ ಚಿತ್ರದುರ್ಗ ಗ್ರಾಮಾಂತರ ಠಾಣೆ ಸಿಪಿಐ ಬಾಲಚಂದ್ರ ನಾಯಕ್ ನೇತೃತ್ವದ ತಂಡ ಅವರ 161 ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ದೂರುದಾರ ಮಹಿಳೆ ನನ್ನ ಇಬ್ಬರು ಮಕ್ಕಳು ಸೇರಿದಂತೆ ಹಾಸ್ಟೆಲ್ನಲ್ಲಿರುವ ಮತ್ತಿಬ್ಬರು ಬಾಲಕಿಯರ ಮೇಲೆ ಮುರುಘಾ ಶ್ರೀಯಿಂದ ಲೈಂಗಿಕ ದೌರ್ಜನ್ಯ ನಡೆದಿದೆ. ಅವರಿಗೆ ಆರು ಜನ ಸಹಾಯ ಮಾಡಿದ್ದಾರೆಂದು ತಿಳಿಸಿದ್ದಾರೆ. ಆದರೆ ದೂರುದಾರ ಮಹಿಳೆಯ ಪುತ್ರಿಯರಲ್ಲಿ ಓರ್ವ ಬಾಲಕಿ ನನ್ನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಹೇಳಿದ್ದಾರೆ. ಇದರಿಂದ ದೂರುದಾರ ಮಹಿಳೆ ಹಾಗೂ ಸಂತ್ರಸ್ತೆಯರ ಹೇಳಿಕೆಗಳು ಬಾರಿ ಗೊಂದಲಮಯವಾಗಿದೆ ಎನ್ನಲಾಗಿದೆ.
ಮುರುಘಾಶ್ರೀ ವಿರುದ್ಧ ದಾಖಲಾಗಿರುವ ಎರಡನೇ ಕೇಸ್ನಲ್ಲಿ ಪೊಲೀಸರ ತನಿಖೆ ಚುರುಕಾಗಿದೆ. ಹೀಗಾಗಿ ಕೇಸ್ ದಾಖಲಾದ ಐದು ದಿನಕ್ಕೆ ನಾಲ್ವರು ಸಂತ್ರಸ್ತೆಯರ 161 ಹೇಳಿಕೆ ದಾಖಲಾಗಿದ್ದು, ಅವರಲ್ಲಿ ಓರ್ವ ಬಾಲಕಿ ಹಾಗೂ ಆಕೆಯ ತಾಯಿಯ 164 ಹೇಳಿಕೆಯನ್ನು ಸಹ ಪೊಲೀಸರು ದಾಖಲಿಸಿದ್ದಾರೆ. ಇನ್ನುಳಿದ ಮೂವರು ಸಂತ್ರಸ್ತೆಯರ ಹೇಳಿಕೆ ದಾಖಲಿಸಲು ಪೊಲೀಸರು ಸಿದ್ದರಾಗಿದ್ದಾರೆ.
. ಕೋವಿಡ್ ಸಂದರ್ಭದಲ್ಲಿ ಮುರುಘಾ ಶ್ರೀಗಳ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಲೇಡಿ ವಾರ್ಡನ್ ಮುರುಘಾ ಶ್ರೀಗಳಿಗೆ ಮೂಲಕ ಕೊಠಡಿಗೆ ಕರೆಸಿಕೊಳ್ಳುತ್ತಿದ್ದನು. ವರ್ಷಗಳ ಕಾಲ ನಿರಂತರ ದೌರ್ಜನ್ಯ ಎಸಗಿರುವ ಆರೋಪಿಸಲಾಗಿದೆ. ಸಂತ್ರಸ್ತ ಬಾಲಕಿ, ತಾಯಿ ನೀಡಿದ ಹೇಳಿಕೆಯಲ್ಲಿ ಕೆಲ ವ್ಯತ್ಯಾಸವಾಗಿದೆ. ಹೇಳಿಕೆಯಲ್ಲಿ ವ್ಯತ್ಯಾಸ ಎಂದು ಮೂಲಗಳಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ, ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಿದ ನಂತರ ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಅವರನ್ನು ಮುರುಘಾ ಮಠದ ಉಸ್ತುವಾರಿ ಪೀಠಾಧಿಪತಿಯಾಗಿ ನೇಮಿಸಲಾಗಿದ್ದು, ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುರುಘಾಮಠದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಮಠದ ಅಧೀನದಲ್ಲಿರುವ ಅಕ್ಕ ಮಹಾದೇವಿ ವಿದ್ಯಾರ್ಥಿ ನಿಲಯದಲ್ಲಿ ವಾಸವಾಗಿದ್ದ ತಮ್ಮ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಹಾಗೂ ಇನ್ನಿತರ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಮುರುಘಾ ಮಠದ ಸ್ವಾಮೀಜಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
BREAKING NEWS : ಸಾರ್ವಜನಿಕ ಸ್ಥಳಗಳಲ್ಲಿ ‘ಮಾಸ್ಕ್’ ಕಡ್ಡಾಯ ಮುಂದುವರಿಕೆ : ಕೇಂದ್ರ ಸರ್ಕಾರದಿಂದ ಸೂಚನೆ