ಕೆಎನ್ಎನ್ ಡಿಜಿಟಲ್ ಡೆಸ್ಕ್ :ಬೆಳ್ಳುಳ್ಳಿ ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುತ್ತದೆ. ಆಹಾರಕ್ಕೆ ಪರಿಮಳ ನೀಡಲು, ವಿಶಿಷ್ಟ ರುಚಿ ನೀಡಲು ಇದನ್ನು ಬಳಸಲಾಗುತ್ತದೆ. ಜೊತೆಗೆ ಆರೋಗ್ಯದ ಅನೇಕ ತೊಂದರೆಗಳಿಗೆ ಚಿಕಿತ್ಸೆ ನೀಡಲು ಔಷಧವನ್ನಾಗಿಯೂ ಬಳಸಲಾಗುತ್ತದೆ.
‘ಸೋನಿಯಾ ಗಾಂಧಿ’ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ಲವೋ ಗೊತ್ತಿಲ್ಲ : ಸಿ.ಟಿ ರವಿ ವಾಗ್ಧಾಳಿ
ಪ್ರತಿದಿನ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಸಾಕಷ್ಟು ಆರೋಗ್ಯ ಲಾಭಗಳಿವೆ. ಒಮ್ಮೆ ತಿಳಿದ್ರೆ ನೀವು ಕೂಡ ಇದನ್ನು ಅಭ್ಯಾಸ ಮಾಡಿಕೊಳುತ್ತಿರಾ.
- ಪ್ರತಿ ದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಮತ್ತು ಹಸಿವು ಹೆಚ್ಚುತ್ತದೆ.
- ಹೃದಯದ ಆರೋಗ್ಯಕ್ಕೆ ಬಹಳ ಉತ್ತಮವ
- ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಬೆಳ್ಳುಳ್ಳಿ ಸಹಕಾರಿ
- ಕ್ಯಾನ್ಸರ್ ಕಾಯಿಲೆಯನ್ನು ದೂರವಿರಿಸುತ್ತದೆ
- ಮಾನಸಿಕ ಒತ್ತಡ ನಿಯಂತ್ರಿಸುವ ಗುಣ ಬೆಳ್ಳುಳ್ಳಿಯಲ್ಲಿದೆ. ಬೆಳ್ಳುಳ್ಳಿಯು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ಶಮನಕಾರಿ ಗುಣ, ಅದೇ ರೀತಿಯ ಆಂಟಿಆಕ್ಸಿಡೆಂಟ್ ಗುಣ ಕೂಡ ಹೊಂದಿದೆ.
- ಬೆಳ್ಳುಳ್ಳಿಯನ್ನು ಬಾಯಲ್ಲಿ ಇಟ್ಟು ಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ದೂರವಾಗುತ್ತದೆ. ಇದರಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿ ಇದೆ.
- ಬೆಳ್ಳುಳ್ಳಿಯಲ್ಲಿರುವ ಆಲೈಸಿನ್ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
- ಬೆಳ್ಳುಳ್ಳಿಯು ಕೆಟ್ಟ ಕೊಲೆಸ್ಟ್ರಾಲ್ನ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಹಾಗಾಗಿ ಪ್ರತಿದಿನ ಬೆಳ್ಳುಳ್ಳಿಯ ಒಂದು ಎಸಳನ್ನು ಜಗಿದು ತಿನ್ನಿ. ಬೆಳ್ಳುಳ್ಳಿ ಜಗಿದು ತಿಂದರೆ ಅದರಿಂದ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್, ಎಂಡಿಎ, ಸಂಕೋಚನದ ಮತ್ತು ವ್ಯಾಕೋಚನದ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಎನ್ನಲಾಗುವುದು.
- ಬೆಳ್ಳುಳ್ಳಿ ಸೇವನೆಯಿಂದ ರಕ್ತ ಶುದ್ಧಿಯಾಗುತ್ತದೆ. ಜೊತೆಗೆ ಜಠರಕ್ಕೆ ಯಾವುದೇ ಸೋಂಕು ಮತ್ತು ಗಾಯವಾಗದಂತೆ ನೋಡಿಕೊಳ್ಳುತ್ತದೆ.
- ಬೆಳ್ಳುಳ್ಳಿ ರಕ್ತದ ಒತ್ತಡ ತಗ್ಗಿಸಿ ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುವುದು.
- ರಕ್ತಹೀನತೆ ಇದ್ದವರು ಬೆಳ್ಳುಳ್ಳಿಯ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು. ಇದು ಲಾಲಾರಸದ ಮೂಲಕ ಆಹಾರದಲ್ಲಿ ಸೇರುತ್ತದೆ. ಹೀಗೆ ಮಾಡುವುದರಿಂದ ರಕ್ತಹೀನತೆ ನಿವಾರಣೆಯಾಗುತ್ತದೆ.
- ಬೆಳ್ಳುಳ್ಳಿಯನ್ನು ಹಸಿಯಾಗಿ ಸೇವಿಸಿದರೆ ಇನ್ನೂ ಒಳ್ಳೆಯದು. ಇದರಲ್ಲಿರುವ ಆಲಿಸಿನ್ ಬೇಯಿಸಿದ ಬೆಳ್ಳುಳ್ಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ.
- ಬೆಳ್ಳುಳ್ಳಿಯು ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೋಗಗಳಿಗೆ ಉತ್ತಮ ಮನೆ ಮದ್ದಾಗಿದೆ. ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಬರುತ್ತಿದ್ದರೆ ಒಂದು ವಾರಕ್ಕೆ ಮುಂಚಿತವಾಗಿ ಎರಡು ಎಸಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ಪ್ರತಿನಿತ್ಯ ರಾತ್ರಿ ಮಲಗುವಾಗ ಸೇವಿಸಿದರೆ ಹೊಟ್ಟೆನೋವು ಕಡಿಮೆಯಾಗುವುದು.
ಬೆಳ್ಳುಳ್ಳಿಯನ್ನು ಯಾರು ಸೇವಿಸಬಾರದು
ಅಸ್ತಮಾ ಕಾಯಿಲೆ ಇರುವವರು ತಿನ್ನಲೇ ಬಾರದು, ಕಾರಣ ಇದು ಅಡ್ಡ ಪರಿಣಾಮ ಬೀರಬಹುದು
ಶಸ್ತ್ರಚಿಕಿತ್ಸೆ ಮೊದಲು ಮತ್ತು ಬಳಿಕ ಬೆಳ್ಳುಳ್ಳಿಯನ್ನು ಸೇವಿಸಲೇ ಬಾರದು.
ವೈದ್ಯರ ಸಲಹೆ ಇಲ್ಲದೆ ದಿನಕ್ಕೆ 3, 4 ಎಸಳನ್ನು ತಿನ್ನಲೇ ಬೇಡಿ.
ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ