ನವದೆಹಲಿ: ರೂಪಾಯಿ ಕುಸಿತದ ಹಿನ್ನೆಲೆಯಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಎಂಟ್ರಿ-ಲೆವೆಲ್ ಸ್ಮಾರ್ಟ್ಫೋನ್ ವಿಭಾಗವು ಬೆಲೆಗಳಲ್ಲಿ ಹೆಚ್ಚಳವನ್ನು ಕಾಣಲಿದೆ ಎಂದು ಖಾಸಗಿ ಮಾಧ್ಯಮವೊಂದರ ವರದಿಯೊಂದು ತಿಳಿಸಿದೆ. ಇದರರ್ಥ 200 ಡಾಲರ್ ಬೆಲೆಯ ಸೆಗ್ಮೆಂಟ್ ಅಥವಾ 16,000 ರೂ.ಗಿಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ಗಳು ಈ ವರ್ಷದ ಅಂತ್ಯದ ವೇಳೆಗೆ ಶೇಕಡಾ 5-7 ರಷ್ಟು ಬೆಲೆ ಏರಿಕೆಗೆ ಸಾಕ್ಷಿಯಾಗಲಿವೆ ಎನ್ನಲಾಗಿದೆ.
ವರದಿಯ ಪ್ರಕಾರ, ಹಬ್ಬದ ಋತುವಿನಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಸ್ಮಾರ್ಟ್ಫೋನ್ ಬ್ರಾಂಡ್ಗಳು ಬಿಡಿಭಾಗಗಳ ಬೆಲೆಗಳ ಹೆಚ್ಚಳದ ವೆಚ್ಚವನ್ನು ತಾವೇ ಭರಿಸಿಕೊಂಡಿದೆ. ಹೀಗಾಗಿ ಲೆಗಳಲ್ಲಿನ ಹೆಚ್ಚಳವು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (ಕ್ಯೂ 4) ಉದ್ಯಮದ ಸರಾಸರಿ ಮಾರಾಟ ಬೆಲೆಯನ್ನು (ಎಎಸ್ಪಿ) 17,000 ರೂ.ಗಳಿಂದ 20,000 ರೂ.ಗೆ ಹೆಚ್ಚಿಸುತ್ತದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಇಂಟರ್ನ್ಯಾಷನಲ್ ಡೇಟಾ ಸೆಂಟರ್ (ಐಡಿಸಿ) ತಿಳಿಸಿದೆ.
ಹಬ್ಬದ ಋತುವಿನ ಮಾರಾಟ ಮುಗಿದ ನಂತರ ಸ್ಮಾರ್ಟ್ಫೋನ್ ಬೆಲೆಗಳಲ್ಲಿ ಶೇಕಡಾ 5-7 ರಷ್ಟು ಏರಿಕೆಯಾಗಲಿದೆ ಎಂದು ಕೌಂಟರ್ಪಾಯಿಂಟ್ ರಿಸರ್ಚ್ ಭವಿಷ್ಯ ನುಡಿದಿದೆ.
ಏತನ್ಮಧ್ಯೆ, ಹಬ್ಬದ ಮಾರಾಟ ಋತುವಿನಲ್ಲಿ ಬೆಲೆಬಾಳುವ 5 ಜಿ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಬ್ಬದ ಋತುವಿನ ಮಾರಾಟದ ಸಮಯದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಒಳಗೊಂಡ 5 ಜಿ ಸ್ಮಾರ್ಟ್ಫೋನ್ಗಳಿಗೆ ಉತ್ತೇಜನ ನೀಡಿದೆ.