ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಮೂರು ವರ್ಷದ ಮಗುವೊಂದು ತನ್ನ ತಾಯಿಯ ಬಗ್ಗೆ ಪೊಲೀಸರಿಗೆ ದೂರು ನೀಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಬುರ್ಹಾನ್ಪುರ ಜಿಲ್ಲೆಯ ದೆಡ್ತಲೈ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.
‘’ನನ್ನ ತಾಯಿ ನನ್ನ ತಿಂಡಿ ಕದ್ದು, ನನ್ನ ಕೆನ್ನೆಗೆ ಹೊಡಿದಿದ್ದಾಳೆ. . ಪಪ್ಪಾ ನಡಿ ಅಮ್ಮನ ಬಗ್ಗೆ ಪೊಲೀಸರಿಗೆ ಕಂಪ್ಲೆಂಟ್ ಕೊಡೋಣ’ ಎಂದು ಪೊಲೀಸ್ ಠಾಣೆಗೆ 3 ವರ್ಷದ ಮಗು ತನ್ನ ಅಪ್ಪನನ್ನು ಕರೆದೊಯ್ದಿದೆ.
ಪೊಲೀಸ್ ಠಾಣೆಯಲ್ಲಿ ‘ತನ್ನ ತಾಯಿ ತನ್ನ ಕೆನ್ನೆಗೆ ಹೊಡೆದಳು ಮತ್ತು ಅವನ ಮಿಠಾಯಿಗಳನ್ನು ಕದ್ದಳು ಎಂದು ಮಗು ಹೇಳಿದೆ. ಅವಳನ್ನು ಜೈಲಿಗೆ ಹಾಕಬೇಕೆಂದು ಮಗು ಒತ್ತಾಯಿಸಿದೆ. ಹುಡುಗನ ದೂರನ್ನು ಕೇಳಿದ ನಂತರ ಎಲ್ಲರೂ ನಕ್ಕರು ಎಂದು ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಹೇಳಿದ್ದಾರೆ. ನಂತರ ಕೊನೆಯಲ್ಲಿ ಮಗುವಿನಿಂದ ಸಹಿ ಮಾಡಿಸಿಕೊಂಡ ಪೊಲೀಸರು. ಜೊತೆಗೆ ಆದಷ್ಟು ಬೇಗ ನಿನ್ನ ಅಮ್ಮನನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.
ಇನ್ನೂ, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ಮಗುವಿಗೆ ವಿಡಿಯೋ ಕಾಲ್ ಮಾಡಿದ್ದು, , ‘ದೀಪಾವಳಿಯಂದು ಮಗುವಿಗೆ ಚಾಕೋಲೇಟ್ ಮತ್ತು ಸೈಕಲ್ ಕಳಿಸುವುದಾಗಿ ಭರವಸೆ ನೀಡಿದ್ದಾರೆ.’ ಮಧ್ಯಪ್ರದೇಶದ ಮೂರು ವರ್ಷದ ಈ ಗಂಡುಮಗು ಸದ್ದಾಂನ ಮುಗ್ದ ಮಾತಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
HEALTH TIIPS: ತಲೆದಿಂಬಿನಿಂದ ಏಷ್ಟೊಂದು ಸಮಸ್ಯೆ ಆಗುತ್ತೆ ಗೊತ್ತಾ? ನೀವು ಮಲಗೋ ದಿಂಬು ಹೀಗಿರಲಿ