ಢಾಕಾ (ಬಾಂಗ್ಲಾದೇಶ): ಸುಸ್ತು, ದೇಹ ನಿರ್ಜಲೀಕರಣಗೊಂಡಾಗ ನೀಡುವ ಓಆರ್ಎಸ್ (Oral Rehydration Solution-ORS) ಅನ್ನು ಸಂಶೋಧಿಸುವ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಜೀವಗಳ ಉಳಿವಿಗೆ ಕಾರಣವಾಗಿದ್ದ ಖ್ಯಾತ ವೈದ್ಯ ಡಾ. ದಿಲೀಪ್ ಮಹಲನಾಬಿಸ್ (Dilip Mahalanabis) ತಮ್ಮ 88ನೇ ವಯಸ್ಸಿಗೇ ಭಾನುವಾರ ಕೋಲ್ಕತ್ತದಲ್ಲಿ ಕೊನೆಯುಸಿರೆಳೆದಿದ್ದಾರೆ.
1970 ರ ದಶಕದಲ್ಲಿ ಪಶ್ಚಿಮ ಬಂಗಾಳದ ಬಂಗಾವ್ ಬಳಿಯ ಶಿಬಿರಗಳಲ್ಲಿ ಲಕ್ಷಾಂತರ ಬಾಂಗ್ಲಾದೇಶದ ನಿರಾಶ್ರಿತರಿಗೆ ಚಿಕಿತ್ಸೆ ನೀಡುವಾಗ ದಿಲೀಪ್ ಅವರು ಮೊದಲ ಬಾರಿಗೆ ORS ಅನ್ನು ಬಳಸಿದರು.
ದಿಲೀಪ್ ಈ ORS ಮೂಲಕ ಕಾಲರಾದಿಂದ ಬಳಲುತ್ತಿರುವ ಹಲವಾರು ಜನರನ್ನು ಗುಣಪಡಿಸಿದರು ಮತ್ತು ಇದು ಜೀವ ನೀಡುವ ಸೂತ್ರವೆಂದು ಸಾಬೀತಾಯಿತು ಎಂದು ಬಾಂಗ್ಲಾ ಟ್ರಿಬ್ಯೂನ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಬಾಂಗ್ಲಾದೇಶ ಲೈವ್ ನ್ಯೂಸ್ ಹೇಳಿದೆ.
ದಿಲೀಪ್ ಮಹಲನಾಬಿಸ್ ಅವರು ತಮ್ಮ ಅಸಾಧಾರಣ ಕೆಲಸಕ್ಕಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಸಂಸ್ಥೆಗಳು ಸಹ ವರ್ಷಗಳಿಂದ ವ್ಯಾಪಿಸಿರುವ ಅವರ ಕೆಲಸವನ್ನು ಗುರುತಿಸಿವೆ.
ದಿಲೀಪ್ ಉಪ್ಪು, ಗ್ಲೂಕೋಸ್ ಹಾಗೂ ಬೇಕಿಂಗ್ ಸೋಡಾ ಮಿಶ್ರಣದಿಂದಾಗಿ ಅತಿಸಾರಕ್ಕೆ ಸುಲಭ ಚಿಕಿತ್ಸೆ ಕಂಡುಹಿಡಿದರು. ಇದರಿಂದ ಕೋಟ್ಯಾಂತರ ಜೀವ ಉಳಿದಿದೆ.
1990 ರಲ್ಲಿ, ಅವರು ಢಾಕಾದ ಪ್ರಸಿದ್ಧ ICDDRB ನಲ್ಲಿ ಕ್ಲಿನಿಕಲ್ ಸಂಶೋಧನಾ ಅಧಿಕಾರಿಯಾಗಿ ನೇಮಕಗೊಂಡರು. ನಂತ್ರ ಹಲವಾರು ವರ್ಷಗಳ ಕಾಲ ಸಮರ್ಥವಾಗಿ ಕಾರ್ಯನಿರ್ವಹಿಸಿದರು.
BIGG NEWS: ಗುಜರಾತ್ ನಲ್ಲಿ ಮತದಾರರನ್ನು ಓಲೈಸಲು ಮುಂದಾದ ಬಿಜೆಪಿ; ಸಿಎನ್ಜಿ, ಅಡುಗೆ ಅನಿಲದ ಮೇಲಿನ ತೆರಿಗೆ ಕಡಿತ
BREAKING NEWS : ಸಿಎಂ ಬೊಮ್ಮಾಯಿ ಭೇಟಿಯಾದ ಸಚಿವಾಕಾಂಕ್ಷಿಗಳು : ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ?