ಗುಜರಾತ್: ಸದ್ಯ ಹಿಮಾಚಲ ಪ್ರದೇಶಕ್ಕೆ ಚುನಾವಣೆ ದಿನಾಂಕ ಘೊಷಣೆ ಆಗಿದೆ. ಮುಂದಿನ ತಿಂಗಳು 12ರಂದು ಮತದಾನ ಹಾಗೂ ಡಿಸೆಂಬರ್ 8ಕ್ಕೆ ಫಲಿತಾಂಶ ಹೊರಗೆ ಬೀಳಲಿದೆ.
ಕಳೆದ ಹಿಂದೆ ಚುನಾವಣಾ ಆಯೋಗ ಗುಜರಾತ್ ರಾಜ್ಯದ ವಿಧಾನಸಭೆ ಚುನಾವಣೆಯೂ ಘೋಷಣೆಯಾಗಬಹುದು ಎಂದು ತಿಳಿಸಿತ್ತು.ಈ ನಡುವೆ ಗುಜರಾತ್ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು,ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಮತದಾರರನ್ನು ಓಲೈಸಲು ಸತತ ಪ್ರಯತ್ನ ನಡೆಸುತ್ತಿವೆ.ದೀಪಾವಳಿ ಹಬ್ಬಸಾಲು ಸಮೀಪಿಸುತ್ತಿರುವ ಸಂದರ್ಭದಲ್ಲಿ ಗುಜರಾತ್ ಸರ್ಕಾರವು ಸಿಎನ್ಜಿ ಮತ್ತು ಪಿಎನ್ಜಿ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 10ರಷ್ಟು ಕಡಿಮೆ ಮಾಡಿದೆ.
ಇದರ ಜೊತೆಗೆ ಉಜ್ವಲ ಯೋಜನೆಯ 38 ಲಕ್ಷ ಫಲಾನುಭವಿಗಳಿಗೆ ವರ್ಷಕ್ಕೆ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ರಿಯಾಯ್ತಿಗಳು ಜಾರಿಗೆ ಬಂದರೆ ಗುಜರಾತ್ ಸರ್ಕಾರಕ್ಕೆ ₹ 1,650 ಕೋಟಿ ಹೊರೆ ಬೀಳಲಿದೆ.ಗುಜರಾತ್ನಲ್ಲಿ ಸಿಎನ್ಜಿ ಮತ್ತು ಪಿಎನ್ಜಿ ಪ್ರಮಾಣವು ಶೇ 15ರಷ್ಟು ಇದೆ. ಮುಂದಿನ ದಿನಗಳಲ್ಲಿ ತೆರಿಗೆ ಪ್ರಮಾಣವು ಶೇ 5ಕ್ಕೆ ಕುಸಿಯಲಿದೆ ಎಂದು ಉದ್ಯಮದ ಮೂಲಗಳು ಹೇಳಿವೆ.