ಬೆಂಗಳೂರು : ಕೇಂದ್ರ ಸರ್ಕಾರವು ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಸಮ್ಮಾನ್ ಯೋಜನೆಯ 12 ಕಂತಿನ ಹಣವನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 50.36 ಲಕ್ಷ ರೈತರಿಗೆ 1007.26 ಕೋಟಿ ರೂ. ವರ್ಗಾವಣೆಯಾಗಲಿದೆ.
BIG NEWS : ಭಾರತದ ಗಡಿ ಪ್ರವೇಶಿಸಿದ ಪಾಕ್ ಡ್ರೋಣ್ ಹೊಡೆದುರುಳಿಸಿದ ಸೇನೆ, 4 ದಿನಗಳಲ್ಲಿ 3 ನೇ ಘಟನೆ
ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದು, ಮಾರ್ಚ್ 2019 ರಿಂದ 53.83 ಲಕ್ಷ ರೈತ ಕುಟುಂಬಗಳು ಕೇಂದ್ರ ಸರ್ಕಾರದಿಂದ ಒಟ್ಟು 9968.57 ಕೋಟಿ ರೂ. ಆರ್ಥಿಕ ಸಹಾಯಧನ ಪಡೆದಿದ್ದು, 2022-23 ನೇ ಸಾಲಿನಲ್ಲಿ 1251.98 ಕೋಟಿ ರೂ. ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.
BIGG NEWS : ನ.11 ರಂದು ಪ್ರಧಾನಿ ಮೋದಿ ರಾಜ್ಯ ಭೇಟಿ : 3 ಕಾರ್ಯಕ್ರಮದಲ್ಲಿ ಭಾಗಿ
ರಾಜ್ಯ ಸರ್ಕಾರವು ಕೇಂದ್ರದಿಂದ ಅನುಮೋದಿಸಲ್ಪಟ್ಟ ರೈತರ ಕುಟುಂಬಗಳಿಗೆ 2022-23 ನೇ ಸಾಲಿನಲ್ಲಿ 956.71 ಕೋಟಿ ರೂ. ಆರ್ಥಿಕ ನೆರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡಲು ಮಂಜೂರಾತಿ ನೀಡಲಾಗಿದೆ.