ಹುಬ್ಬಳ್ಳಿ: ವಾರ್ಡ್ ನಂ.35 ರ ಭೈರಿದೇವರಕೊಪ್ಪದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 8 ಕೋಟಿ ಅನುದಾನದಲ್ಲಿ, ಎರಡು ಸಣ್ಣ ಸೇತುವೆ ಒಳಗೊಂಡಂತೆ ಭೈರಿದೇವರಕೊಪ್ಪ – ಮಾರಡಗಿ, ಭೈರಿದೇವರಕೊಪ್ಪ – ಸೋಮಾಪುರ ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಕಾಮಗಾರಿಗಳು ಹಾಗೂ ಭೈರಿದೇವರಕೊಪ್ಪ – ಸದಾಶಿವ ನಗರದ 24*7 ಕುಡಿಯುವ ನೀರು ಕಾಮಗಾರಿಗೆ ಭೂಮಿ ಪೂಜೆಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೆರವೇರಿಸಿದೆ.
BIGG NEWS: ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ; ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ
ನಂತರ ಮಾತನಾಡಿ, ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ನಮ್ಮ ಸರ್ಕಾರದ ಮುಖ್ಯ ಧ್ಯೇಯ ರೈತರ ಅಭಿವೃದ್ಧಿ ಎಂದು ಹೇಳಿದ್ದಾರೆ.
ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ಮನೆಯಿಂದ ಹೊಲಗಳಿಗೆ ಸರಾಗವಾಗಿ ಓಡಾಡಬಹುದು. ಅಲ್ಲದೇ ಬೆಳೆದ ಬೆಳೆಗಳನ್ನು ಸುಲಭವಾಗಿ ಸಾಗಿಸಬಹುದು. ರಸ್ತೆಗಳು ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.ಇನ್ನೂ ನಮ್ಮ ಸರ್ಕಾರದ ರೈತರ ಪರವಾದ ಸರ್ಕಾರ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದರು.